ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಮುಖಂಡರ ಸಭೆ
ಉಪ್ಪಳ: ಭಾರತೀಯ ಜನತಾ ಪಕ್ಷ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮುಖಂಡರ ಸಭೆ ಸದಾ ಶಿವ ಕಲಾವೃಂದ ಚೆರುಗೋಳಿಯಲ್ಲಿ ಜರಗಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಕುಂಬಳೆ ಮಂಡಲ ಅಧಕ್ಷ ಸುನಿ ಲ್ ಅನಂತಪುರ, ಪ್ರಧಾನ ಕಾರ್ಯ ದರ್ಶಿ ವಸಂತ ಕುಮಾರ ಮಯ್ಯ, ಬಿಜೆಪಿ ಉತ್ತರ ವಲಯ ಅಧ್ಯಕ್ಷ ದಿನೇಶ್ ಮುಳಿಂಜ, ದಕ್ಷಿಣ ವಲಯ ಅಧಕ್ಷ ರಾಮಚಂದ್ರ ಬಲ್ಲಾಳ್ ಹಾಗೂ ಚುನಾಯಿತ ಜನಪ್ರತಿನಿ ಧಿಗಳು ಉಪಸ್ಥಿತರಿದ್ದರು. ಪ್ರಧಾನ ಕಾ ರ್ಯದರ್ಶಿ ಕಿಶೋರ್ ಬಂದ್ಯೋಡು ಸ್ವಾಗತಿಸಿ, ಪ್ರವೀಣ್ ಚೆರುಗೋಳಿ ವಂದಿಸಿದರು.