ಬಿದ್ದು ಸಿಕ್ಕಿದ ಚಿನ್ನದ ಸರವನ್ನು ನೀಡಿ ಮಾದರಿಯಾದ ನಿವೃತ್ತ ಬ್ಯಾಂಕ್ ಮೆನೇಜರ್
ಕಾಸರಗೋಡು: ಜನರಲ್ ಆಸ್ಪ ತ್ರೆಗೆ ಚಿಕಿತ್ಸೆಗಾಗಿ ತಲುಪಿದ ರೋಗಿ ಯ ಎರಡೂವರೆ ಪವನ್ ತೂಕದ ಚಿನ್ನದ ತಾಳಿಮಾಲೆ ಕಳೆದುಹೋ ಗಿತ್ತು. ಇದು ಬಿದ್ದು ಸಿಕ್ಕಿದ ಮಂಜೇಶ್ವರ ಕುಂಜತ್ತೂರಿನ ನಿವೃತ್ತ ಎಸ್ಬಿಟಿ ಬ್ಯಾಂಕ್ ಮೆನೇಜರ್ ಕೆ.ಜಿ. ವಿಶ್ವನಾಥನ್ರಿಗೆ ಲಭಿಸಿತ್ತು. ಮಾಲೆ ಕಳೆದುಹೋದ ಬಗ್ಗೆ ಛಾಯಾಚಿತ್ರಗಾರ ಕುಮಾರ್ರಲ್ಲಿ ತಿಳಿಸಿದ್ದು, ಅವರು ಕೂಡಲೇ ಆಸ್ಪತ್ರೆ ಅಧಿಕಾರಿಗೆ ತಿಳಿಸಿದ್ದಾರೆ. ತಕ್ಷಣವೇ ಆಸ್ಪತ್ರೆಯ ಧ್ವನಿವರ್ಧಕದ ಮೂಲಕ ತಿಳಿಸಿದ್ದು, ಇದನ್ನು ಕೇಳಿದ ವಿಶ್ವನಾಥನ್ ಆ ಕ್ಷಣವೇ ಚಿನ್ನದ ಮಾಲೆಯನ್ನು ಆಸ್ಪತ್ರೆಯ ಅಧಿಕಾರಿಗಳಿಗೆ ನೀಡಿದರು. ಆ ಬಳಿಕ ಅದನ್ನು ಮಾಲೆ ಕಳೆದುಕೊಂಡಿದ್ದ ಕೂಡ್ಲು ಗಂಗೆ ರಸ್ತೆಯ ಸದಾಶಿವನ್ರಿಗೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್, ನೌಕರರು ಸೇರಿ ಹಸ್ತಾಂ ತರಿಸಿದರು. ಸದಾಶಿವರ ಪತಿ ಸುಜಾ ತಾರ ತಾಳಿಮಾಲೆ ಬಿದ್ದು ಹೋಗಿತ್ತು. ವಿಶ್ವನಾಥರ ಪ್ರಾಮಾಣಿಕತೆಯನ್ನು ಅವರು ಪ್ರಶಂಸಿಸಿದರು.