ಬಿದ್ದು ಸಿಕ್ಕಿದ ಪರ್ಸ್ ವಾರೀಸುದಾರರಿಗೆ ನೀಡಿ ಮಾನವೀಯತೆ ಮೆರೆದ ಯುವಕ
ಉಪ್ಪಳ: ಬಿದ್ದು ಸಿಕ್ಕಿದ 7500 ರೂ ಹಣವಿದ್ದ ಪರ್ಸ್ನ್ನು ಅದರ ವಾರೀಸುದಾರರಿಗೆ ನೀಡಿ ಮಾನವೀಯತೆ ಮೆರೆದ ಯುವಕನನ್ನು ಸ್ಥಳೀಯರು ಅಭಿನಂದಿಸಿದ್ದಾರೆ. ಬಂದ್ಯೋಡಿನಲ್ಲಿ ಅಲ್ಯುಮೀನಿಯಂ ಫೆಬ್ರಿಕ್ಸ್ ಅಂಗಡಿ ನಡೆಸುತ್ತಿರುವ ಕುಡಾಲು ಮೇರ್ಕಳ ಪದ್ಮಗದ್ದೆ ನಿವಾಸಿ ಜೋಗಿ ಮೂಲ್ಯರ ಪುತ್ರ ಮಧು ಕಿರಣ್ ಹಣಹೊಂದಿದ ಪರ್ಸ್ನ್ನು ವಾರೀಸುದಾರ ಕುಡಾಲು ನಿವಾಸಿ ಬಶೀರ್.ಬಿ.ಎ ರವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇವರ ಪರ್ಸ್ ಮೊನ್ನೆ ಸಂಜೆ ಕಳೆದು ಹೋಗಿತ್ತು. ಅಂದು ರಾತ್ರಿ ಮಧುಕಿರಣ್ ಕೆಲಸ ಮುಗಿಸಿ ಮನೆ ಕಡೆಗೆ ಹೋಗುವ ವೇಳೆ ಸುಬ್ಬಯ್ಯ ಕಟ್ಟೆಯಲ್ಲಿ ಪರ್ಸ್ ಬಿದ್ದು ಸಿಕ್ಕಿದೆ. ಬಳಿಕ ಅದರಲ್ಲಿದ್ದ ಲೈಸನ್ಸ್ ಸಹಿತ ದಾಖಲೆಗಳನ್ನು ನೋಡಿ ವಾರೀಸುದಾರರನ್ನು ಪತ್ತೆ ಹಚ್ಚಿ ಹಸ್ತಾಂತರಿಸಿದ್ದಾರೆ. ಇವರ ಈ ಕಾರ್ಯಕ್ಕೆ ಪೈವಳಿಕೆ ಪಂಚಾಯತ್ ಸದಸ್ಯ ಅಶೋಕ ಭಂಡಾರಿ ಸಹಿತ ಊರವರು ಅಭಿನಂದನೆ ಸಲ್ಲಿಸಿದ್ದಾರೆ.