ಬಿದ್ದು ಸಿಕ್ಕಿದ ಬ್ಯಾಗ್ ವಾರೀಸುದಾರರಿಗೆ ಹಸ್ತಾಂತರಿಸಿ ಮಾದರಿಯಾದ ವ್ಯಾಪಾರಿ
ಬದಿಯಡ್ಕ: ಬಿದ್ದು ಸಿಕ್ಕಿದ ಹಣ ಸಹಿತ ಬ್ಯಾಗ್‌ನ್ನು ಅದರ ವಾರೀಸುದಾರರಿಗೆ ಹಿಂತಿರುಗಿ ನೀಡಿ ವಿದ್ಯಾಗಿರಿಯ ರಮೇಶ್ ಆಳ್ವ ಮಾದರಿಯಾಗಿದ್ದಾರೆ. ಬದಿಯಡ್ಕ ಮೇಲಿನ ಪೇಟೆಯಲ್ಲಿ ವಾಹನ ಇನ್‌ಶೂರೆನ್ಸ್ ಸಂಸ್ಥೆ ಹಾಗೂ ಟಿ.ವಿ.ಎಸ್ ಶೋರೂಂ ಮಾಲಕನಾಗಿ ರುವ ರಮೇಶ್ ಆಳ್ವರಿಗೆ ಕಾಸರಗೋಡು ಆರ್‌ಟಿಒ ಕಚೇರಿ ಬಳಿ ಬ್ಯಾಗೊಂದು ಬಿದ್ದು ಸಿಕ್ಕಿತ್ತು. ಬ್ಯಾಗ್‌ನಲ್ಲಿ 100 ಸಾವಿರ ರೂಪಾಯಿ, 1 ಲಕ್ಷ ರೂ ಬೆಲೆಯ ಐಫೋನ್ ಹಾಗೂ ದಾಖಲೆಪತ್ರಗಳಿದ್ದವು. ಆ ಬಗ್ಗೆ ಪರಿಶೀಲನೆ ನಡೆಸಿದಾಗ ಬ್ಯಾಗ್ ತಳಂಗರೆ ನಿವಾಸಿ ಹಾರೀಸ್ ಎಂಬ ವರ ಪತ್ನಿಯದ್ದೆಂದು ತಿಳಿದುಬಂದಿದೆ. ಕೂಡಲೇ ವಾರೀಸುದಾರರನ್ನು ಪತ್ತೆ ಹಚ್ಚಿ ಬ್ಯಾಗ್ ಹಸ್ತಾಂತರಿಸಲಾಯಿತು.