ಬಿರುಗಾಳಿಗೆ ಮನೆ ಕುಸಿದು ಬಿದ್ದು ಬಾಲಕಿಗೆ ಗಾಯ
ಕಾಸರಗೋಡು: ಬಿರುಗಾಳಿಗೆ ಹೆಂಚು ಹಾಸಿದ ಮನೆಯಲ್ಲಿ ಮೇಲ್ಛಾವಣಿ ಕುಸಿದು ಬಿದ್ದು ಬಾಲಕಿ ಗಾಯಗೊಂಡ ಘಟನೆ ನಡೆದಿದೆ. ಹೊಸದುರ್ಗ ಅಧಿಞ್ಞಲ್ ಜುಮ್ಮ ಮಸೀದಿ ಸಮೀಪದ ರಿಯಾಸ್ ಎಂಬವರ ಮನೆ ನಿನ್ನೆ ಈ ರೀತಿ ಕುಸಿದು ಬಿದ್ದಿದೆ. ಆ ವೇಳೆ ರಿಯಾಸ್‌ರ ಮಗ ಬಾಸಿಲಿನ್ (8) ಗಾಯಗೊಂಡಿದ್ದಾನೆ. ಮನೆ ಕುಸಿದ ಬೀಳುವ ವೇಳೆ ರಿಯಾಸ್‌ರ ಪುತ್ರಿ ಮಿಸ್ರಿ (11) ಮತ್ತು ಸಂಬಂಧಿಕರಾದ ಕೆ. ಆಯಿಷಾ ಎಂಬವರು ಮನೆಯೊಳಗಿದ್ದರು. ಮನೆ ಕುಸಿದು ಬೀಳುವ ಶಬ್ದ ಕೇಳಿದಾಗ ಅವರೆಲ್ಲರೂ ತಕ್ಷಣ ಹೊರಕ್ಕೆ ಓಡಿ ಅಪಾಯದಿಂದ ಪಾರಾಗಿದ್ದಾರೆ.