ಬೀಗ ಜಡಿದ ಮನೆಯಲ್ಲಿ ಕಳವು: ಆರೋಪಿ ಸೆರೆ
ಕಾಸರಗೋಡು: ಬೀಗ ಜಡಿದ ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳವು ಗೈದ ಪ್ರಕರಣದ ಆರೋಪಿಯನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕಾಸರಗೋಡು ಚೌಕಿ ಕೆ.ಕೆ. ಪುರದ ನಿವಾಸಿ ಹಾಗೂ ಈಗ ಚೆರುವತ್ತೂರು ತೆಕಾಡ್ ಆರೋಗ್ಯ ಕೇಂದ್ರದ ಬಳಿ ವಾಸಿಸುತ್ತಿರುವ ಕೆ.ವಿ. ಅಬ್ದುಲ್ ಲತೀಫ್ (36) ಬಂಧಿತ ಆರೋಪಿ. ಪೊಯಿನಾಚಿ ಪಡಿಞಾರಡ್ಕದ ಎಂ. ವಿನೋದ್ ಕುಮಾ ರ್ ಎಂಬವರ ಬೀಗ ಜಡಿದ ಮನೆಗೆ ಕಳೆದ ಮೇ 28 ಮತ್ತು 30ರ ಮಧ್ಯೆ ನುಗ್ಗಿ ಅಲ್ಲಿಂದ ಹಣ ಕಳವುಗೈದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.