ಬೆರಿಪದವು: ಉದ್ಯೋಗ ಖಾತರಿ ಯೋಜನೆಯಲ್ಲಿ ವಂಚನೆ ಆರೋಪಿಸಿ ಪಂ. ಕಾರ್ಯದರ್ಶಿಗೆ ಸಿಪಿಎಂ ದೂರು
ಪೈವಳಿಕೆ: ಪಂಚಾಯತ್‌ನ ಏಳನೇ ವಾರ್ಡ್ ಬೆರಿಪದವಿನಲ್ಲಿ ತೋಡು ಪುನರುದ್ಧಾರ, ಬದಿ ಸಂರಕ್ಷಣೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆಯೆಂದು ಸಿಪಿಎಂ ಬಾಯಾರ್ ಲೋಕಲ್ ಸಮಿತಿ ಆರೋಪಿಸಿದೆ. ಇಲ್ಲಿ ಬಿಜೆಪಿಯ ವಾರ್ಡ್ ಸದಸ್ಯನ ಸಹಾಯದಿಂದ ಜೆಸಿಬಿ ಮೂಲಕ ಕೆಲಸ ನಡೆಸಿ ಅದನ್ನು ಕಾರ್ಮಿಕರಿಂದ ಮಾಡಿಸಲಾ ಗಿದೆ ಎಂದು ದಾಖಲಿಸಿ ಅವ್ಯವಹಾರ ನಡೆಸಲಾಗಿದೆಯೆಂದು ಲೋಕಲ್ ಸಮಿತಿ ಕಾರ್ಯದರ್ಶಿ ಪುರುಷೋ ತ್ತಮ ಬಳ್ಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರ ಕೆಲಸವನ್ನು ಇಲ್ಲದಂತೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಸಿಪಿಎಂ ಆರೋಪಿಸಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಂಚಾಯತ್ ಕಾರ್ಯ ದರ್ಶಿಗೆ ದೂರು ನೀಡಿರುವುದಾಗಿ ಸಿಪಿಎಂ ಬಾಯಾರು ಲೋಕಲ್ ಸಮಿತಿ ತಿಳಿಸಿದೆ.