ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರಕ್ಕೆ ರಾಷ್ಟ್ರೀಯ ಪುರಸ್ಕಾರ
ಬೆಳ್ಳೂರು: ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ. ಜಿಲ್ಲೆಯ ಮಲೆನಾಡು ಗ್ರಾಮವಾದ ಬೆಳ್ಳೂರಿನ ಕುಟುಂಬ ಆರೋಗ್ಯ ಕೇಂದ್ರ ಸರಕಾರ ಆರೋಗ್ಯ ರಂಗದಲ್ಲಿ ಉತ್ತಮ ಚಟುವಟಿಕೆ ನಿರ್ವಹಿಸುವ ಸಂಸ್ಥೆಗೆ ನೀಡುವ ನೇಶನಲ್ ಕ್ವಾಲಿಟಿ ಅಶೂರೆನ್ಸ್ ಸ್ಟಾಂಡರ್ಡ್ ಪುರಸ್ಕಾರವನ್ನು ಪಡೆದುಕೊಂಡಿದೆ.
ಈ ಹಿಂದೆ ಕೇರಳ ಸರಕಾರ ನೀಡುವ ಕಾಯಕಲ್ಪ ಪುರಸ್ಕಾರಕ್ಕೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನವೂ ಇದೇ ಆರೋಗ್ಯ ಕೇಂದ್ರಕ್ಕೆ ಲಭಿಸಿತ್ತು. ಒಪಿ, ಲ್ಯಾಬ್, ಜನರಲ್ ಅಡ್ಮಿನಿಸ್ಟ್ರೇಶನ್, ಸಾರ್ವಜನಿಕ ಆರೋಗ್ಯ ವಿಭಾಗ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ನಿರ್ವಹಣೆ, ಶುಚಿತ್ವ, ರೋಗಾಣು ನಿಯಂತ್ರಣ, ಅಗತ್ಯದ ಔಷಧಿಗಳ ಲಭ್ಯತೆ, ಗುಣಮಟ್ಟ, ರೋಗಿ ಸೌಹಾರ್ದ ಚಟುವಟಿಕೆಗಳು ಮೊದಲಾದವುಗಳನ್ನು ಪರಿಗಣಿಸಿ ಅಂಗೀಕಾರ ನೀಡಲಾಗುತ್ತದೆ. ಬಹುಮಾನವಾಗಿ ಮುಂದಿನ ಮೂರು ವರ್ಷಗಳಲ್ಲಿ ತಲಾ ೨ ಲಕ್ಷ ರೂಪಾಯಿ ಲಭಿಸುವುದು. ಆರ್ಥಿಕವಾಗಿ ಭಾರೀ ಹಿಂದುಳಿದಿರುವ ಪಂಚಾಯತ್ ಆಗಿದ್ದರೂ ಕುಟುಂಬ ಆರೋಗ್ಯ ಕೇಂದ್ರವನ್ನು ರಾಷ್ಟ್ರೀಯ ಗುಣಮಟ್ಟಕ್ಕೆ ಏರಿಸಲು ಮಾದರಿ ಯೋಜನೆಗಳನ್ನು ಆವಿಷ್ಕರಿಸಿದ ಪಂಚಾಯತ್ ಅಧ್ಯಕ್ಷ ಎಂ. ಶ್ರೀಧರ, ಉಪಾಧ್ಯಕ್ಷೆ ಗೀತಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ್ ಎಂಬಿವರನ್ನೊಳ ಗೊಂಡ ಪಂಚಾಯತ್ ಆಡಳಿತ ಸಮಿತಿಯ ಹಾಗೂ ಮೆಡಿಕಲ್ ಆಫೀಸರ್ ಡಾ| ಜ್ಯೋತಿ ಮೋಳ್, ಮಾಜಿ ಮೆಡಿಕಲ್ ಆಫೀಸರ್ ಡಾ| ಶ್ರೀಶ್ಮ, ಡಾ| ರವಿ ಪ್ರಸಾದ್ ಸಹಿತ ಇತರ ಆಸ್ಪತ್ರೆ ನೌಕರರ, ಎಚ್ಎಂಸಿ ಸದಸ್ಯರ, ಆಶಾ ಕಾರ್ಯಕರ್ತರು ಹಾಗೂ ಜನರ ಸಹಕಾರವೇ ರಾಷ್ಟ್ರೀಯ ಪುರಸ್ಕಾರ ಈ ಆರೋಗ್ಯ ಕೇಂದ್ರಕ್ಕೆ ಲಭಿಸಲು ಸಹಾಯಕ ವಾಗಿದೆ. ಒ.ಪಿ. ಲ್ಯಾಬೋರೇಟರಿ, ಪಾಲಿಯೇಟಿವ್, ಫಿಸಿಯೋಥೆರಫಿ, ಎಂಡೋಸಲ್ಫಾನ್ ಕ್ಲಿನಿಕ್, ಸಾರ್ವಜನಿಕ ಆರೋಗ್ಯ ವಿಭಾಗ ಕ್ಲಿನಿಕ್ಗಳು, ಸೇವೆಗಳು, ಡ್ರೆಸ್ ಬ್ಯಾಂಕ್, ಪೋಷಕಾಹಾರ ನೀಡಲು ಕೃಷಿ ಇಲಾಖೆಯೊಂದಿಗೆ ಸಹಕರಿಸಿ ನಡೆಸುತ್ತಿರುವ ಜೈವಿಕ ಕೃಷಿ ತರಕಾರಿ ವಿತರಣೆ, ಪಾಲಿಯೇಟಿವ್ ವಿಭಾU ಕ್ಕಿರುವ ಉದ್ಯೋಗ ತರಬೇತಿ ಮೊದಲಾದ ಯೋಜನೆಗಳು ಕೂಡಾ ಆಸ್ಪತ್ರೆಯ ನೇತೃತ್ವದಲ್ಲಿ ನಡೆಯುತ್ತಿದೆ.