ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನ ವಾರ್ಷಿಕ ಜಾತ್ರೆ ೨೨ರಿಂದ
ಬೆಳ್ಳೂರು: ಇಲ್ಲಿನ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆ ಈ ತಿಂಗಳ ೨೨, ೨೩ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಪೂರ್ವಭಾವಿ ಯಾಗಿ ೧೫ರಂದು ಗೊನೆ ಮುಹೂರ್ತ ನಡೆಯಲಿದೆ. ೨೧ರಂದು ಸಂಜೆ ೪ ಗಂಟೆಗೆ ನಾಟೆಕಲ್ಲು ಶ್ರೀ ಅಯ್ಯಪ್ಪ ಜನಾಮಂದಿರ, ಹರಿನಗರ ಶ್ರೀ ಗಣೇಶ ಮಂದಿರ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ ೫ ಗಂಟೆಗೆ ಉಗ್ರಾಣ ತುಂಬಿಸುವುದು, ೬ಕ್ಕೆ ಭಜನೆ, ೭ರಿಂದ ವೈದಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ.
೨೨ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ನವಕ, ೮ರಿಂದ ಭಜನೆ, ೯ ಗಂಟೆಗೆ ಭಗವದ್ಗೀತೆ, ರಾಮಾಯಣ ಪಾರಾಯಣ, ೧೦ ಗಂಟೆಗೆ ಭಜನೆ, ೧೧ರಿಂದ ತುಲಾಭಾರ ಸೇವೆ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ೨ ಗಂಟೆಗೆ ಯಕ್ಷಗಾನ ತಾಳಮದ್ದಳೆ, ೪ ಗಂಟೆಗೆ ಭಜನೆ, ಸಂಜೆ ೬ ಗಂಟೆಗೆ ಅಯೋಧ್ಯೆಯಲ್ಲಿ ಶ್ರೀ ರಾಮವಿಗ್ರಹ ಪ್ರತಿಷ್ಠಾಪನೆಯಂಗವಾಗಿ ಬೆಳ್ಳೂರು ಲಕ್ಷದೀಪೋತ್ಸವ, ರಾತ್ರಿ ೯ ಗಂಟೆಗೆ ಭೂತಬಲಿ ಉತ್ಸವ, ಅನ್ನ ಸಂತರ್ಪಣೆ ನಡೆಯಲಿದೆ.
೨೩ರಂದು ಬೆಳಿಗ್ಗೆ ೮ಕ್ಕೆ ಭಜನಾರ್ಚನೆ, ೯ ಗಂಟೆಗೆ ಶ್ರೀ ದೇವರ ದರ್ಶನಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ೨ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ೪ ಗಂಟೆಗೆ ಭಜನೆ, ೫.೩೦ಕ್ಕೆ ಯಕ್ಷಗಾನ, ರಾತ್ರಿ ೮ಕ್ಕೆ ರಂಗಪೂಜೆ, ಅನ ಸಂತರ್ಪಣೆ, ೯.೩೦ರಿಂದ ‘ಗುಳಿಗ- ಶಿವಗುಳಿಗ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.