ಬೇಳ ಕುಮಾರಮಂಗಲ ಕ್ಷೇತ್ರದಲ್ಲಿ ಷಷ್ಠೀ ಮಹೋತ್ಸವ
ಬದಿಯಡ್ಕ: ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠೀ ಮಹೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಉತ್ಸವದ ಅಂಗವಾಗಿ ನೀರ್ಚಾಲು ಅಶ್ವತ್ಥ ಕಟ್ಟೆಯಿಂದ ಹಾಗೂ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಿAದ ಹಸಿರುವಾಣಿ ಮೆರವಣಿಗೆ ನಡೆಯಿತು. ಗಣಪತಿ ಹೋಮ, ವೇದಪಾರಾಯಣ, ನವಕಾಭಿಷೇಕ, ತುಲಾಭಾರ ಸೇª,ೆ ದೀಪಾರಾಧನೆ, ತಾಯಂಬಕA, ಏಣಿಯರ್ಪು ತರವಾಡು ಮನೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದವರಿAದ ಹುಲ್ಪೆ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಮಣಿಕಂಠ ಭಜನಾ ಸಂಘ ಮಜಿರ್ಪಳ್ಳಕಟ್ಟೆಯ ಮಕ್ಕಳಿಂದ ಕುಣಿತ ಭಜನೆ, ರಾತ್ರಿ ಶ್ರೀದೇವರಿಗೆ ರಂಗಪೂಜೆ, ಉತ್ಸವಬಲಿ, ಬೇಳದ ಅಶ್ವತ್ಥ ಕಟ್ಟೆಗೆ ಶ್ರೀದೇವರ ಶೋಭಾಯಾತ್ರೆ, ಪೂಜೆ, ಬೆಡಿಕಟ್ಟೆಯಲ್ಲಿ ಬೆಡಿಸೇವೆ ಜರಗಿತು. ಮಂಗಳವಾರ ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯಿತು.