ಬೇಸಿಗೆ ಮಳೆ ತೀವ್ರ : ಮುಂಗಾರು ಶೀಘ್ರ ಆಗಮನ
ಕಾಸರಗೋಡು: ರಾಜ್ಯದಲ್ಲಿ ಬೇಸಿಗೆ ಮಳೆ ಮುಂದುವರಿಯುತ್ತಿರು ವಂತೆಯೇ ಮುಂಗಾರು ಮಳ ಇನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿ ದೆಯೆಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ. ನಿರೀಕ್ಷೆಯಂತೆಯೇ ನೈಋತ್ಯ ಮುಂಗಾರು ಮೋಡಗಳು ನಿನ್ನೆ ಅಂಡಮಾನ್‌ಗೆ ತಲುಪಿದೆಯೆಂದು ದೃಢೀಕರಿಸಲಾಗಿದೆ. ಈ ತಿಂಗಳ 23ರ ವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅತೀ ತೀವ್ರ ಮಳೆ ಸುರಿಯುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.
ಇದೇ ವೇಳೆ ಬೇಸಿಗೆ ಮಳೆಯಿಂದಾಗಿ ವಿವಿಧೆಡೆ ವ್ಯಾಪಕ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ. ಕಣ್ಣೂರು ಮುಂಡಯಾಡ್ ವೈದ್ಯರು ವೀಡಗ ಎಂಬಲ್ಲಿನ ಕುರುಪ್ಪನ್ ಕುನ್ನುಂಪಾರದಲ್ಲಿ ಮರದ ರೆಂಬೆ ಮುರಿದು ಬಿದ್ದು ಕೆ. ಪುಷ್ಪ (79) ಎಂಬವರು ಮೃತಪಟ್ಟಿದ್ದಾರೆ. ತಿರುವನಂತಪುರದಲ್ಲಿ ಮನೆ ಮುಂದೆ ನೀರು ತುಂಬಿಕೊಂಡಿದ್ದ ಹೊಂಡದಲ್ಲಿ ಬಿದ್ದು ಚಾರತೋಪು ಮುಡಕ್ಕೆ ವೀಟಿಲ್ ವಿಕ್ರಮನ್ (82) ಎಂಬವರು ಮೃತಪಟ್ಟಿದ್ದಾರೆ.