ಬೈಕ್ಗೆ ಲಾರಿ ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃತ್ಯು
ಚೆರ್ಕಳ: ರಾಷ್ಟ್ರೀಯ ಹೆದ್ದಾರಿಯ ಬೇವಿಂಜೆ ತಿರುವಿನಲ್ಲಿ ಬೈಕ್ನ ಹಿಂಬದಿ ಸವಾರ ವಿದ್ಯಾರ್ಥಿ ಲಾರಿ ಢಿಕ್ಕಿ ಹೊಡೆದು ಮೃತಪಟ್ಟನು. ಬೈಕ್ ಚಲಾಯಿಸಿದ ಗೆಳೆಯ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಯಲ್ಲಿದ್ದಾನೆ. ನಾಯಮ್ಮಾರ್ ಮೂಲೆ ಟಿಐಎಚ್ಎಸ್ಎಸ್ನ ಪ್ಲಸ್ವನ್ ವಿದ್ಯಾರ್ಥಿ ಆಲಂಪಾಡಿ ಎರಿಯಪ್ಪಾಡಿಯ ಶಿಹಾಬ್ (೧೭) ಮೃತಪಟ್ಟರುವುದು. ಮಂಗಳೂರು ಖಾಸಗಿ ಕಾಲೇಜಿನ ಬಿಬಿಎ ವಿದ್ಯಾರ್ಥಿ ಎರಿಯಪ್ಪಾಡಿಯ ಆದಿಲ್ (೧೮)ನನ್ನು ಗಾಯಗಳೊಂ ದಿಗೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶನಿವಾರ ಸಂಜೆ ಬೇವಿಂಜೆ ಸ್ಟಾರ್ ನಗರದಲ್ಲಿ ಅಪಘಾತ ಸಂಭವಿಸಿದೆ.