ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕ ಮೃತ್ಯು
ಚೆರ್ಕಳ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಚೆಂಗಳ ತೈವಳಪ್ಪಿನ ಸಿ.ವಿ. ಅಬೂಬ ಕರ್- ಖದೀಜಾ ದಂಪತಿ ಪುತ್ರ ಸಿ.ವಿ. ಶಫೀಕ್ (22) ಸಾವನ್ನಪ್ಪಿದ ಯುವಕ. 2023 ಡಿಸೆಂಬರ್ 17ರಂದು ಎರ್ನಾಕುಳಂನಲ್ಲಿ ಈ ಅಪಘಾತ ನಡೆ ದಿತ್ತು. ಎರ್ನಾಕುಳಂನ ಹೋಟೆಲೊಂ ದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಶಫೀಕ್ ಕೆಲಸ ಮುಗಿಸಿ ಬೈಕ್ನಲ್ಲಿ ತನ್ನ ವಾಸಸ್ಥಳಕ್ಕೆ ಹೋಗುತ್ತಿದ್ದ ದಾರಿ ಮಧ್ಯೆ ಆ ಬೈಕ್ಗೆ ಇನ್ನೊಂದು ಬೈಕ್ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡು ಚಲನ ಶಕ್ತಿಯನ್ನೂ ಕಳೆದುಕೊಂಡಿದ್ದ ಶಫೀಕ್ರನ್ನು ಕಳೆದ ಮೂರು ತಿಂಗಳಿAದ ಎರ್ನಾಕುಳಂನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಅವರನ್ನು ಅಲ್ಲಿಂದ ಕಾಸರಗೋಡಿಗೆ ತಂದು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸ ಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಸಾವನ್ನಪ್ಪಿದ್ದಾಕೆ.
ಮೃತರು ಹೆತ್ತವರ ಹೊರತಾಗಿ ಸಹೋದರರಾದ ಅಬ್ದುಲ್ ಸಲಾಂ, ಅಬ್ದುಲ್ ಕಲಾಂ, ನಿಝಾಮುದ್ದಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವ ಸಹೋದರ ಮುಹಮ್ಮದ್ ನಿಯಾಸ್ ಈ ಹಿಂದೆ ನಿಧನ ಹೊಂದಿದ್ದರು.