ಬೈಕ್ ಕಳವು: ಯುವಕ ಸೆರೆ
ಕಾಸರಗೋಡು: ಬೈಕ್ ಕಳವು ಗೈದ ಪ್ರಕರಣದ ಆರೋಪಿಯನ್ನು ಹೊಸದುರ್ಗ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ಪಿ. ಆಜಾದ್ ನೇತೃತ್ವದ ಪೊಲೀಸರು ಬಂಧಿಸಿ ದ್ದಾರೆ. ಬಾಲನಡ್ಕದ ಉಮ್ಮರ್ ಫಾರೂಕ್ (೨೩) ಬಂಧಿತನಾದ ಆರೋಪಿ. ಈತ ಇತರ ಹಲವು ಕಳವು ಪ್ರಕರಣಗಳಲ್ಲೂ ಆರೋಪಿಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಣ್ಣೂರು ವಿಶ್ವವಿದ್ಯಾಲಯದ ಅಸಿಸ್ಟೆಂ ಟ್ ಪ್ರೊಫೆಸರ್ ಪ್ರಿಯದರ್ಶನ್ ಎಂಬವರ ಬೈಕ್ ಹೊಸದುರ್ಗ ರೈಲು ನಿಲ್ದಾಣ ಪರಿಸರದಿಂದ ಕೆಲವು ದಿನಗಳ ಹಿಂದೆ ಕಳವುಗೈಯ್ಯ ಲ್ಪಟ್ಟಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಿಸಿ ಟಿವಿ ದೃಶ್ಯಗಳ ಆಧಾರದಲ್ಲಿ ಪರಿಶೀಲನೆ ನಡೆಸಿದ್ದರು. ಅದರ ಆಧಾರದಲ್ಲಿ ಆರೋ ಪಿಯನ್ನು ಬಂಧಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.