ಬೈಕ್- ಟ್ಯಾಂಕರ್ ಲಾರಿ ಢಿಕ್ಕಿ ಕಾಲೇಜು ವಿದ್ಯಾರ್ಥಿಗೆ ಗಂಭೀರ ಗಾಯ
ಕುಂಬಳೆ: ನಯಬಜಾರ್ ಬಳಿಯ ಕುಕ್ಕಾರ್ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿರುವ ಬಂಬ್ರಾಣ ಬಳಿಯ ಯುವಕ ಗಂಭೀರ ಗಾಯಗೊಂಡಿದ್ದಾರೆ.
ಬಂಬ್ರಾಣ ಅಂಡಿತ್ತಡ್ಕ ನಿವಾಸಿ ಯೂಸಫ್ ಕೈಫ್ (೧೯) ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ ೭.೪೫ರ ವೇಳೆ ಕುಕ್ಕಾರ್ ಶಾಲೆ ಬಳಿಯ ಸರ್ವಿಸ್ ರಸ್ತೆಯಲ್ಲಿ ಯೂಸಫ್ ಕೈಫ್ ಸಂಚರಿಸುತ್ತಿದ್ದ ಬೈಕ್ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ನೀರು ಸಾಗಿಸುವ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಯೂಸಫ್ ಕೈಫ್ ಮಂಗಳೂರಿನ ಕಾಲೇಜಿನ ಬಿ.ಕಾಂ ವಿದ್ಯಾರ್ಥಿಯಾಗಿದ್ದಾರೆ. ಇಂದು ಬೆಳಿಗ್ಗೆ ಅವರು ಕಾಲೇಜಿಗೆಂದು ತೆರಳುತ್ತಿದ್ದಾಗ ಅಪಘಾತ ವುಂಟಾಗಿದೆ.