ಬೈಕ್ ತಡೆದು ನಿಲ್ಲಿಸಿ ಯುವಕನಿಗೆ ಹಲ್ಲೆ : ಐವರ ವಿರುದ್ಧ ಕೇಸು
ಕಾಸರಗೋಡು: ಮೊಗ್ರಾಲ್ ಪುತ್ತೂರು ಬಳ್ಳೂರು ಬಿಸ್ಮಿಲ್ಲ ಮಂಜಿಲ್‌ನ ಅಶ್ರಫ್ ಬಿ.ಐ. (೩೧) ಎಂಬವರ ಮೇಲೆ ಹಲ್ಲೆ ನಡೆಸಿದ ದೂರಿನಂತೆ ಐದು ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡ ಅಶ್ರಫ್‌ರನ್ನು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಅಶ್ರಫ್ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಮೊಗ್ರಾಲ್ ಪುತ್ತೂರು ಕಡವತ್ ರಸ್ತೆ ಬಳಿ ಬೈಕನ್ನು ಅಪ್ತಾಬ್, ಇರ್ಷಾದ್, ಬಶೀರ್ ಅಸಾಫ್ ಮತ್ತು ಅಬ್ಬಾಸ್ ಎಂಬವರು ತಡೆದು ನಿಲ್ಲಿಸಿ ಹಲ್ಲೆ ಗೈದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸ ಲಾಗಿದೆ. ಪೂರ್ವ ದ್ವೇಷವೇ ಹಲ್ಲೆಗೆ ಕಾರಣವೆಂದು ಹೇಳಲಾಗುತ್ತಿದೆ.