ಬೋಟ್ ಅಪಘಾತದಲ್ಲಿ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ
ಕಾಸರಗೋಡು: ನೀಲೇಶ್ವರ ಅಳಿತ್ತಲದಲ್ಲಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಅಪಘಾತಕ್ಕೀಡಾಗಿ ನಾಪತ್ತೆಯಾ ಗಿದ್ದ ಬೆಸ್ತ ಮಲಪ್ಪುರಂ ಪರಪ್ಪನಂಗಾಡಿ ಚಟ್ಟಪ್ಪಾಡಿ ಆಲುಂಗಾಲ್ ಬೀಚ್‌ನ ಅದಂಪುರಕ್ಕಲ್ ಎ.ಪಿ. ಮುಜೀಬ್ (ಮುನೀರ್ 48)ರ ಮೃತದೇಹವನ್ನು ನಿನ್ನೆ ಅಪರಾಹ್ನ ಹೊಸದುರ್ಗ ಪೂಂಜಾವಿ ಕಡಪ್ಪುರದಲ್ಲಿ ಪತ್ತೆಹಚ್ಚಲಾಗಿದೆ. ಅಪಘಾತಕ್ಕೀಡಾದ ಬೋಡ್‌ನಲ್ಲಿ ಒಟ್ಟು ೩೬ ಬೆಸ್ತರಿದ್ದರು. ಅದರಲ್ಲಿ ಪರಪ್ಪನಂಗಾಡಿ ಅರಿಮಲ್ಲೂರು ಬೀಚ್ ನಿವಾಸಿ ಅಬೂಬಕ್ಕರ್ ಕೋಯಾ (೫೫) ಅಪಘಾತ ನಡೆದ ದಿನವಾದ ಮೊನ್ನೆ ಸಾವನ್ನಪ್ಪಿದ್ದರು. ಆ ವೇಳೆ ಮುಜೀಬ್ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ನೌಕಾಪಡೆ ಮತ್ತು ಕರಾವಳಿ ಪೊಲೀಸರು ಸಮುದ್ರದಲ್ಲಿ ವ್ಯಾಪಕ ಶೋಧ ಆರಂಭಿಸಿರುವಂತೆಯೇ ಮುಜೀಬ್‌ರ ಮೃತದೇಹ ನಿನ್ನೆ ಪೂಂಜಾವಿ ಕಡಪ್ಪುರ ಬಳಿಯ ಸಮುದ್ರದಲ್ಲಿ ಪತ್ತೆಯಾಗಿದೆ. ಹಂಸಕೋಯಾರ ಪುತ್ರನಾಗಿರುವ ಮೃತ ಮುಜೀಬ್ ಪತ್ನಿ ನೌನರ, ಮಕ್ಕಳಾದ ಇಮ್ರಾನ್, ನಹ್ಲ ಫೆಬಿನ್, ಮುಹಮ್ಮದ್ ನಿಹಾದ್, ಸಹೋದರ-ಸಹೋದರಿಯರಾದ ರಶೀದ್, ಫಿರೋಸ್, ಸಫೂರಾ, ನಸ್ರೀನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.