ಬ್ರಾಹ್ಮಣ ಪರಿಷತ್ ಜಿಲ್ಲಾ ಸಮಾವೇಶ ನಾಳೆ ಎಡನೀರಿನಲ್ಲಿ
ಕಾಸರಗೋಡು: ಜಿಲ್ಲೆಯ ಏಳರಷ್ಟು ಬ್ರಾಹ್ಮಣ ಸಂಘಟನೆಗಳ ಒಕ್ಕೂಟವಾದ ಬ್ರಾಹ್ಮಣ ಪರಿಷತ್ನ ಜಿಲ್ಲಾ ಸಮಾವೇಶ ನಾಳೆ ಎಡನೀರು ಮಠದಲ್ಲಿ ನಡೆಯಲಿದೆ. ಹವ್ಯಕ, ಶಿವಳ್ಳಿ, ಕರಾಡ, ಯೋಗಕ್ಷೇಮ ಸಭಾ, ಕೂಟ ಮಹಾಜಗತ್ತು, ಅಯ್ಯರ್ ಸಭಾ, ಸ್ಥಾನಿಕ ಇತ್ಯಾದಿ ಬ್ರಾಹ್ಮಣ ಸಂಘಟನೆಗಳ ಒಕ್ಕೂಟವಾಗಿದೆ ಬ್ರಾಹ್ಮಣ ಜಿಲ್ಲಾ ಪರಿಷತ್. ನಮ್ಮ ಸಮಾಜ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಸಲಾಗುವುದು.
ನಾಳೆ ಬೆಳಿಗ್ಗೆ 10 ಗಂಟೆಗೆ ಎಡನೀರು ಮಠದಲ್ಲಿ ಆರಂಭಗೊಳ್ಳಲಿ ರುವ ಸಮಾವೇಶವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಯವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡುವರು. ನಂತರ ವಿವಿಧ ವಿಷಯಗಳ ಬಗ್ಗೆ 11.30ಕ್ಕೆ ವಿಚಾರಗೋಷ್ಠಿಗಳು ನಡೆಯಲಿದೆ. ಸಮ್ಮೇಳನದಂಗವಾಗಿ ಮಧ್ಯಾಹ್ನ 1.45ಕ್ಕೆ ಬೊಂಬೆಯಾಟ, 2.30ರಿಂದ ತಿರುವಾದಿರಕ್ಕಳಿ, ನೃತ್ಯಾರ್ಪಣ, ಭರತನಾಟ್ಯ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ. ಸಮಾರೋಪ ಸಮಾರಂಭವನ್ನು ಕರ್ನಾಟಕ ಬ್ಯಾಂಕ್ ಚೆಯರ್ಮೆನ್ ಪ್ರದೀಪ್ ಕುಮಾರ್ ಪಂಜ ಉದ್ಘಾಟಿಸುವರು. ಬ್ರಾಹ್ಮಣ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಸಮಾವೇಶದಲ್ಲಿ ಗೌರವಿಸಿ ಸನ್ಮಾನಿಸಲಾಗುವುದೆಂದು ಈ ಬಗ್ಗೆ ಪ್ರೆಸ್ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಬAಧಪಟ್ಟವರು ತಿಳಿಸಿದ್ದಾರೆ. ಬ್ರಾಹ್ಮಣ ಪರಿಷತ್ ಅಧ್ಯಕ್ಷ ಎಚ್. ವಿಠಲ್ ಭಟ್, ಸಂಘಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಐ.ವಿ. ಭಟ್, ಪ್ರಧಾನ ಕಾರ್ಯದರ್ಶಿ ಸೂರ್ಯನಾರಾಯಣ ಭಟ್ ಪನತ್ತಡಿ, ಎಚ್.ಎಸ್. ಭಟ್, ಟಿ. ಜಯನಾರಾಯಣ ತಾಯನ್ನೂರು ಸಹ ಸಂಚಾಲಕ ಪ್ರೊ. ಎ. ಶ್ರೀನಾಥ್, ವಿಷ್ಣುಮೋಹನ ಎಡನೀರು ಮತ್ತು ಪೆರಿಕಾಮನ ಮುರಳೀಧರನ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮiಹಿತಿ ನೀಡಿದರು.
ಸಮ್ಮೇಳನದಂಗವಾಗಿ ನಾಳೆ ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, ಬಳಿಕ ಭಜನೆ ನಡೆಯಲಿದೆ. ನಂತರ ಸಮ್ಮೇಳನ ಆರಂಭಗೊಳ್ಳಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.