ಭರದಿಂದ ಸಾಗುತ್ತಿರುವ ಉಪ್ಪಳ ಫ್ಲೈಓವರ್ ಕಾಮಗಾರಿ
ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಉಪ್ಪಳದಲ್ಲಿ ಫ್ಲೈಓವರ್ ಕಾಮಗಾರಿ ಮುಂದುವರಿಯುತ್ತಿದೆ. ತಿಂಗಳ ಹಿಂದೆ ಆರಂಭಿಸಿದ ಕಾಮಗಾರಿಯಲ್ಲಿ ಈಗ ೧೬ ಫಿಲ್ಲರ್‌ಗಳ ಸ್ಥಾಪನೆ ಕೆಲಸ ನಡೆ ಯುತ್ತಿದೆ. ಬಸ್ ನಿಲ್ದಾಣ ಬಳಿಯಿಂದ ಸುಮಾರು ೨೦೦ ಮೀಟರ್ ಉದ್ದದ ಫ್ಲೈಓವರ್ ನಿರ್ಮಾಣವಾಗಲಿದೆ.
ಕಾಮಗಾರಿ ನಡೆಯುತ್ತಿರುವುದ ರಿಂದಾಗಿ ವಾಹನ ಸಂಚಾರಕ್ಕೆ ರಸ್ತೆ ಅಗಲೀಕರಣದ ಕಾರಣ ವಾಹನ ದಟ್ಟಣೆ ಪೇಟೆಯಲ್ಲಿ ಕಂಡು ಬರುತ್ತಿದೆ. ಇದರಿಂದ ಸಂಚಾರ ಸಮಸ್ಯೆಯೂ ಉಂಟಾಗುತ್ತಿದೆ. ತಲಪಾಡಿಯಿಂದ ಕಾಸರಗೋಡು ತನಕ ಸರ್ವೀಸ್ ರಸ್ತೆ ನಿರ್ಮಾಣವಾಗುತ್ತಿದೆ. ಇದರ ಕಾಮಗಾರಿ ಪೊಸೋಟು, ಕುಕ್ಕಾರು, ಕುಂಬಳೆ, ಎರಿಯಾಲ್‌ನಲ್ಲಿ ಪೂರ್ತಿ ಗೊಂಡಿದೆ. ಉಳಿದ ಕಡೆಗಳಲ್ಲೂ ಭರದಿಂದ ನಡೆಯುತ್ತಿದೆ.