ಭಾರತೀಯ ತೀಯ ಸಮಾಜ ವಾರ್ಷಿಕ ಮಹಾಸಭೆ
ಉದ್ಯಾವರ: ಭಾರತೀಯ ತೀಯ ಸಮಾಜ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆ ಕುಂಜತ್ತೂರು ಮಾಡ ತೀಯ ಸಭಾಭವನದಲ್ಲಿ ನಡೆಯಿತು. ಕೇಂದ್ರ ಸಮಿತಿಯ ಅಧ್ಯಕ್ಷ ಸದಾಶಿವ ಉಳ್ಳಾಲ ಅಧ್ಯಕ್ಷತೆ ವಹಿಸಿದರು. ಮಾಡ ಕ್ಷೇತ್ರದ ರಾಜ ಬೆಳ್ಚಪ್ಪಾಡ, ಜನಾರ್ದನ ಕೆ, ಸತೀಶನ್, ಗೋಪಾಲನ್, ಪ್ರೇಂಚಂದ್, ಎಂ.ಸಿ.ಸುಖೇಶ್, ನೀಲಯ್ಯ, ಪದ್ಮನಾಭ, ಕೇಶವ, ನಾಗೇಶ್, ಪುರುಷ ಸಾಲಿಯಾನ್, ಸತೀಶ್, ಪವಿತ್ರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತೀಯ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷರಾದ ಸದಾಶಿವ ಉಳ್ಳಾಲರನ್ನು ನಾಗೇಶ್ ಕಾರ್ಲೆ ಸನ್ಮಾನಿಸಿದರು.