‘ಭಾರತ್ ಅಕ್ಕಿ’ ಈ ವಾರದಿಂದ ಎಲ್ಲಾ ಜಿಲ್ಲೆಗಳಲ್ಲೂ ವಿತರಣೆ ಆರಂಭ

ಕಾಸರಗೋಡು: ಬೆಲೆಯೇರಿಕೆ ಯಿಂದ ತತ್ತರಿಸುತ್ತಿರುವ ಜನತೆಗೆ ನೆಮ್ಮದಿ ನೀಡಲು ಕೇಂದ್ರ ಸರಕಾರ ಕಿಲೋ ಒಂದಕ್ಕೆ ೨೯ ರೂ. ದರದಲ್ಲಿ ಮಾರಾಟ ಮಾಡಲಾರಂಭಿಸಿರುವ ‘ಭಾರತ್ ಅಕ್ಕಿ’ಯ ವಿತರಣೆ ಈ ವಾರದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆರಂಭಗೊಳ್ಳಲಿದೆ.

ಇದಕ್ಕಾಗಿ ಕಾಲಡಿಯಲ್ಲಿರುವ ನ್ಯಾಷನಲ್ ಕೋಪರೇಟಿವ್ ಕನ್ಸೂಮರ್ ಫೆಡರೇಶನ್ (ಎನ್‌ಸಿಪಿಎಫ್) ದಾಸ್ತಾನು ಕೇಂದ್ರಕ್ಕೆ ಈಗಾಗಲೇ ೧೦,೦೦೦ ಟನ್ ಅಕ್ಕಿ ಬಂದು ಸೇರಿದೆ. ಅಲ್ಲಿಂದ ಈ ಅಕ್ಕಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪೂರೈಸುವ ಕ್ರಮವನ್ನು ಕೈಗೊಳ್ಳಲಾಗಿದೆ.

ಭಾರತ್ ಬ್ರಾಂಡ್ ಅಕ್ಕಿಯ ರಾಜ್ಯ ಮಟ್ಟದ ವಿತರಣೆಯ ಉದ್ಘಾಟನೆ ಫೆ. ೭ರಂದು ತೃಶರಿನಲ್ಲೂ, ರಾಜ್ಯ ಕೇಂದ್ರ ಮಟ್ಟದ ಉದ್ಘಾಟನೆ ಅದೇ ದಿನದಂದು ದಿಲ್ಲಿಯಲ್ಲಿ ನೆರವೇರಿಸಲಾಗಿತ್ತು. ತೆರದ ಮಾರುಕಟ್ಟೆಯಲ್ಲಿ ೪೨ ರೂ. ಬೆಲೆಯಿರುವ ಈ ಉತ್ತಮ ಗುಣಮಟ್ಟದ ಅಕ್ಕಿಯನ್ನು ಕೇಂದ್ರ ಸರಕಾರ ೨೯ ರೂ.ಗಳಿಗೆ ವಿತರಿಸುತ್ತಿದೆ ಎಂದು ಎನ್‌ಸಿಸಿಎಫ್ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಅಕ್ಕಿಗೆ ದೇಶದಾದ್ಯಂತವಾಗಿ ಭಾರೀ ಬೇಡಿಕೆಯೂ ಉಂಟಾಗಿದೆ.

Leave a Reply

Your email address will not be published. Required fields are marked *

You cannot copy content of this page