ಭೀತಿ ಸೃಷ್ಟಿಸುತ್ತಿರುವ ವಾಹನ ಅಪಘಾತ: ಜಿಲ್ಲೆಯಲ್ಲಿ ಈ ವರ್ಷ ಬಲಿತೆಗೆದುಕೊಂಡಿದ್ದು 146 ಮಂದಿಯ ಪ್ರಾಣ
ಕಾಸರಗೋಡು: ಸಾರಿಗೆ ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸುವವರ ವಿರುದ್ಧ ಒಂದೆಡೆ ಪೊಲೀಸರು ಹಾಗೂ ಇನ್ನೊಂದೆಡೆ ಮೋಟಾರು ವಾಹನ ಇಲಾಖೆಯ ವರು ಕಟ್ಟು ನಿಟ್ಟಿನ ಕ್ರಮ ಆರಂಭಿಸಿ ದರೂ ವಾಹನ ಅಪಘಾತ ಪ್ರಮಾಣ ನಿರಂತರವಾಗಿ ಹೆಚ್ಚಾಗ ತೊಡಗಿದೆ. ಜಿಲ್ಲೆಯಲ್ಲಿ ಈ ವರ್ಷ ಈತನಕ ಉಂಟಾದ ವಾಹನ ಅಪಘಾತ ಗಳಲ್ಲಾಗಿ ಒಟ್ಟು 146 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 70 ಮಂದಿ ಅಪಘಾತ ನಡೆದ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ಉಳಿದ 76 ಮಂದಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ೪೩೨ ಮಂದಿ ಗಂಭೀರ ಗಾಯಗೊಂ ಡರೆ, 578 ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ.ಜಿಲ್ಲೆಯಲ್ಲಿ ಈ ವರ್ಷ ಈತನಕ ಒಟ್ಟು 987 ವಾಹನ ಅಪಘಾತಗಳು ನಡೆದಿವೆ. ಇದರಿಂದಾಗಿ ಜನರು ರಸ್ತೆಗಿಳಿಯಲು ಭಯಪಡುವ ಸ್ಥಿತಿ ಉಂಟಾಗಿದೆ. ಪೊಲೀಸರ ಲೆಕ್ಕಾಚಾರ ದಂತೆ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 3ರಂತೆ ವಾಹನ ಅಪಘಾತಗಳು ನಡೆಯುತ್ತಿದೆ. ಮಾತ್ರವಲ್ಲ ವಾಹನ ಅಪಘಾತದಲ್ಲಿ ಪ್ರಾಣ ಕಳೆದುಕೊ ಳ್ಳುತ್ತಿರುವವರ ಸಂಖ್ಯೆಯೂ ಇನ್ನೊಂ ದೆಡೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ನಾಲ್ಕು ಪ್ರದೇಶಗಳಲ್ಲಿ ಅತೀ ಹೆಚ್ಚು ವಾಹನ ಅಪಘಾತಗಳು ನಡೆಯುತ್ತಿದ್ದು, ಇದನ್ನು ಮೋಟಾರು ವಾಹನ ಇಲಾಖೆ ಬ್ಲಾಕ್ ಸ್ಪೋಟ್ ಆಗಿ ಗುರುತಿಸಿಕೊಂಡಿದೆ. ಟ್ರಾಫಿಕ್ ಕಾನೂನುಗಳ ಉಲ್ಲಂಘನೆ ಹಾಗೂ ಅಜಾಗ್ರತೆಯಿಂದ ವಾಹನ ಚಲಾಯಿ ಸುವುದೇ ಅಪಘಾತ ಹೆಚ್ಚಾಗಲು ಪ್ರಧಾನ ಕಾರಣವಾಗುತ್ತಿದೆ