ಮಂಗಲ್ಪಾಡಿ ಏಕಾಹ ಭಜನಾ ಮಂದಿರ ವಜ್ರಮಹೋತ್ಸವ ಸಮಾಪ್ತಿ
ಮಂಗಲ್ಪಾಡಿ: ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ವಜ್ರ ಮಹೋತ್ಸವದಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೂಗಳ ಜಾಗೃತಿ ಹಾಗೂ ಒಗ್ಗಟ್ಟು ಉದ್ದೀಪನಗೊಳಿಸಲು ಧಾರ್ಮಿಕ ಶಿಕ್ಷಣದ ಅವಶ್ಯಕತೆಯಿದೆ. ಇಲ್ಲಿ ಆ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದರು. ಧಾರ್ಮಿಕ ಸಭೆಯಲ್ಲಿ ಸುರೇಶ್ ಶೆಟ್ಟಿ ಪರಂಕಿಲ ಅಧ್ಯಕ್ಷತೆ ವಹಿಸಿದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಲಿಂಗಪ್ಪ ಶೆಟ್ಟಿಗಾರ್ ಅವರ ಏಳುಬೀಳಿನ ಬಾಳು ಎಂಬ ಕೃತಿಯನ್ನು ಬಿಡುಗಡೆ ಗೊಳಿಸಿ ಲಿಂಗಪ್ಪ ಶೆಟ್ಟಿಗಾರ್ ದಂಪತಿ ಯನ್ನು ಗೌರವಿಸಲಾಯಿತು. ಡಾ. ಶ್ರೀಧರ ಭಟ್, ಪ್ರವೀಣ್ ಅರಿಕ್ಕಾಡಿ, ಕೃಷ್ಣ ಶಿವಕೃಪ, ಮೋಹನ್ ಶೆಟ್ಟಿ ತೂಮಿನಾಡು, ಗಣೇಶ್ ರೈ ಕೋಡಿಬೈಲು, ಮೀರಾ ಆಳ್ವ, ರವಿನಾರಾಯಣ ಗುಣಾಜೆ, ವಿಜಯ ಕುಮಾರ್ ರೈ ಮಾತನಾಡಿದರು. ವೇದಾಂತ ಕಾರಂತ ಪ್ರಾರ್ಥನೆ ಹಾಡಿದರು. ಶ್ರೀಧರ ಶೆಟ್ಟಿ ವಂದಿಸಿದರು. ಕಳೆದ ೪ರಂದು ಉದ್ಘಾಟಿಸಲ್ಪಟ್ಟ ಭಜನಾ ಕಾರ್ಯಕ್ರಮ ನಿರಂತರವಾಗಿ ೭ ದಿನಗಳ ಕಾಲ ನಡೆದು ನಿನ್ನೆ ಮುಕ್ತಾಯಗೊಂಡಿತು. ಇದರಂಗ ವಾಗಿ ಕಲಾಕುಂಚ ಗಡಿನಾಡ ಘಟಕ ಮತ್ತು ಮಂದಿರದ ಸಹಯೋಗದಲ್ಲಿ ಗೀತಾ ಕಂಠಪಾಠ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆ ಜರಗಿತು. ಬಳಿಕ ಸತ್ಯನಾರಾಯಣ ಪೂಜೆ ನಡೆಯಿತು.