ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಅಭಾವ ಪರಿಹರಿಸಬೇಕು-ಶಾಸಕ
ಮಂಜೇಶ್ವರ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರುಗಳ ಖಾಲಿ ಹುದ್ದೆ ಭರ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಕೆಎಂ ಅಶ್ರಫ್ ಆಗ್ರಹಪಟ್ಟರು. ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸಭಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಂಪುಕಲ್ಲು, ಕಗ್ಗಲ್ಲು ಅನಧಿಕೃತ ಕ್ವಾರೆಗಳ ವಿರುದ್ಧ ಜಿಯೋಲಜಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಯೆಂದೂ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು. ಬಂಬ್ರಾಣದಲ್ಲಿ ೪೦೦ ಎಕ್ರೆಯಷ್ಟು ಕೃಷಿ ಭೂಮಿ ವನ್ಯ ಮೃಗಗಳ ಹಾವಳಿಯಿಂದ ನಷ್ಟವುಂಟಾಗಿರುವು ದರಿಂದಾಗಿ ಕೃಷಿಕರಿಗೆ ಸೂಕ್ತ ನಷ್ಟಪರಿಹಾರ ನೀಡಲು ಕೃಷಿ ಇಲಾಖೆ ಕ್ರಮ ಕೈಗೊಳ್ಳಲಿದೆಯೆಂದೂ ತಿಳಿಸಲಾಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್, ಪುತ್ತಿಗೆ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ, ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್, ಮಂಜೇಶ್ವರ ತಹಶೀಲ್ದಾರ್ ಟಿ.ಸಜಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳು, ಅಧಿಕಾರಿಗಳು ಭಾಗವಹಿಸಿದರು. ಸಭೆಗೆ ತಲುಪಿದ ೨೦ರಷ್ಟು ದೂರುಗಳ ಪೈಕಿ ಹತ್ತು ದೂರುಗಳಿಗೆ ಪರಿಹಾರ ಕಾಣಲಾಯಿತು. ಹೆಡ್ ಕ್ವಾರ್ಟರ್ಸ್ ಡೆಪ್ಯುಟಿ ತಹಶೀಲ್ದಾರ್ ಡೆಲಿ ಕುಮಾರ್ ವಂದಿಸಿದರು.