ಮಂಗಲ್ಪಾಡಿ ಪಂಚಾಯತ್‌ನ್ನು ವಿಭಜಿಸಬೇಕು ಅಥವಾ ನಗರಸಭೆಯಾಗಿ ಮಾರ್ಪಡಿಸಬೇಕೆಂಬ ಬೇಡಿಕೆ: ಪಂ. ಸದಸ್ಯನಿಂದ ಹೈಕೋರ್ಟ್‌ಗೆ ಅರ್ಜಿ

ಉಪ್ಪಳ: ಜನಸಂಖ್ಯೆಗೆ ಅನುಸರಿಸಿ ಪಂಚಾಯತ್‌ನ್ನು ವಿಭಜಿಸಲು ಅಥವಾ ನಗರಸಭೆಯಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳದೆ ಮಂಗಲ್ಪಾಡಿ ಪಂಚಾಯತ್‌ನ್ನು ಈ ಬಾರಿಯೂ ಸರಕಾರ ಅವಗಣಿಸಿರುವುದಾಗಿ ದೂರಲಾಗಿದೆ. ಪಂಚಾಯತ್‌ನ್ನು ಎರಡಾಗಿ ವಿಭಜಿಸಬೇಕು ಅಥವಾ ನಗರಸಭೆಯಾಗಿ ಮಾರ್ಪಡಿಸಬೇಕೆಂಬ ಬೇಡಿಕೆಯನ್ನು  ಮುಂದಿರಿಸಿಕೊಂಡು ಮಂಗಲ್ಪಾಡಿ ಪಂಚಾಯತ್ ಆಡಳಿತ ಸಮಿತಿ ಠರಾವು ಮಂಜೂರುಗೊಳಿಸಿ ಸರಕಾರಕ್ಕೆ ಸಮರ್ಪಿಸಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ವಿಷಯವನ್ನು ಪರಿಗಣಿಸಲು ಸಾಧ್ಯವಿಲ್ಲವೆಂಬುದಾಗಿದೆ ಸರಕಾರದ ನಿಲುವು. ಈ ವಿಷಯದಲ್ಲಿ ಮಂಗಲ್ಪಾಡಿ ಪಂಚಾಯತ್ ಸದಸ್ಯ ಮಜೀದ್ ಪಚ್ಚಂಬಳ  ನ್ಯಾಯವಾದಿ ಅನಸ್ ಶಂನಾದ್‌ರ ಮೂಲಕ ಹೈಕೋ ರ್ಟ್‌ನ್ನು ಸಮೀಪಿಸಿದ್ದಾರೆ. ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ  ಈ ವಿಷಯದಲ್ಲಿ ಸರಕಾರದೊಂದಿಗೆ ಸ್ಪಷ್ಟೀಕರಣ ಕೇಳುವ ಸಾಧ್ಯತೆ ಇದೆ. ಕೇರಳ ಪಂಚಾಯತ್‌ರಾಜ್ ಕಾಯ್ದೆ ಗಳಿಗೆ ಅನುಸರಿಸಿ ಮಂಗಲ್ಪಾಡಿ ಪಂಚಾ ಯv ನಲ್ಲಿ ಈಗಾಗಲೇ ಗರಿಷ್ಠ ಜನಸಂ ಖ್ಯೆ ಇದೆ. ಆದ್ದರಿಂದ ಹೆಚ್ಚುವರಿಯಾಗಿ 17 ವಾರ್ಡ್‌ಗಳು ಬೇಕೆಂದು ಅರ್ಜಿದಾರ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಪಟ್ಟಿದ್ದಾರೆ. ಜನಸಂಖ್ಯೆ ಹೆಚ್ಚಿದ್ದರೂ ಜನಸಂಖ್ಯೆ ಕಡಿಮೆಯುಳ್ಳ ಪಂಚಾ ಯತ್‌ಗಳಲ್ಲಿರುವ ನೌಕರರ ಸಂಖ್ಯೆಯೇ ಮಂಗಲ್ಪಾಡಿಯಲ್ಲಿದೆ. ಆದ್ದರಿಂದ ಜನರಿಗೆ ಯಥಾ ಸಮಯಗಳಲ್ಲಿ ಸೇವೆ ಲಭಿಸುತ್ತಿಲ್ಲ. ಇದರಿಂದ ನೂರಾರು ಕಡತಗಳು ತೀರ್ಪು ಕಲ್ಪಿಸಲು ಉಳಿದುಕೊಳ್ಳುತ್ತಿದೆ. ಕೆಲಸದ ಒತ್ತಡದಿಂದ ನೌಕರರು ಸಮಸ್ಯೆಗೀಡಾಗುತ್ತಿದ್ದಾರೆ. ಜನಸಂಖ್ಯೆಯ ಆಧಾರದಲ್ಲಿ 15,000ಕ್ಕಿಂತ ಕಡಿಮೆಯಾಗಿದ್ದಲ್ಲಿ ಕನಿಷ್ಠ 13 ವಾರ್ಡ್‌ಗಳು ಇರಬೇಕು. ಅಲ್ಲದೆ ೧೫೦೦೦ಕ್ಕಿಂತ ಹೆಚ್ಚಿದ್ದಲ್ಲಿ ಪ್ರತೀ 2500 ಮಂದಿಗೆ ಒಂದು ಹೊಸ ವಾರ್ಡ್ ರೂಪೀಕರಿ ಸಬೇಕೆಂದು ಪಂಚಾಯತ್ ರಾಜ್ ಕಾಯ್ದೆಯಲ್ಲಿ ತಿಳಿಸಿರುವಾಗಲೇ ಮಂಗಲ್ಪಾಡಿ ಪಂಚಾಯತ್‌ನಲ್ಲಿ  ಮಾತ್ರ ಈ ಪರಿಸ್ಥಿತಿ ಎದುರಾಗಿದೆ. ಜನಸಂಖ್ಯೆ ಕಡಿಮೆಯುಳ್ಳ ಪಂಚಾಯತ್‌ಗಳಲ್ಲಿ ಹಾಗೂ ಅತೀ ಹೆಚ್ಚಿರುವ ಮಂಗಲ್ಪಾಡಿ ಪಂಚಾ ಯತ್‌ನಲ್ಲೂ ಒಂದೇ ಸಂಖ್ಯೆಯ ನೌಕರರನ್ನು  ನೇಮಿಸುವುದು ಸರಿಯಲ್ಲ. ಪಂಚಾಯತ್‌ನಲ್ಲಿ ತೆರಿಗೆ ಪಾವತಿಸುವವರ ಅಭಿವೃದ್ಧಿ, ಕ್ಷೇಮ ಸಹಿತ ಹಕ್ಕುಗಳಿಗೆ ತೊಂದರೆಯಾ ಗದಂತೆ ಸರಕಾರದಿಂದ ಕ್ರಮವುಂಟಾ ಗಬೇಕು. ಆದ್ದರಿಂದ ಮಂಗಲ್ಪಾಡಿ ಪಂಚಾಯತ್‌ನ್ನು ವಿಭಜಿಸಬೇಕು ಅಥವಾ ನಗರಸಭೆಯಾಗಿ ಭಡ್ತಿಗೊಳಿ ಸಬೇಕೆಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page