ಮಂಗಲ್ಪಾಡಿ ಸೇವಾಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಗೆ ಸಹಕಾರ ಭಾರತಿ ಅಭ್ಯರ್ಥಿಗಳ ಅವಿರೋಧ ಆಯ್ಕೆ
ಮಂಗಲ್ಪಾಡಿ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ 2024-26ನೇ ವರ್ಷದ ಆಡಳಿತ ಸಮಿತಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ 11 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಪ್ರೇಮ್ ಕುಮಾರ್, ಉಪಾಧ್ಯಕ್ಷರಾಗಿ ಭರತ್ ರೈ ಕೋಡಿಬೈಲು ಮತ್ತು ಸಮಿತಿಯ ಸದಸ್ಯರಾಗಿ ರವೀಶ ಕೊಡಂಗೆ, ಜಯಂತ ಬಂದ್ಯೋಡು, ಸಂಜೀವ ಐತ, ಅಮಿತ್ ಇ.ಎಸ್, ಹರಿನಾಥ್ ಭಂಡಾರಿ, ರಘು ಚೆರುಗೋಳಿ, ರಜನಿ ಸುರೇಶ, ಹೇಮಾವತಿ ಸದಾಶಿವ, ಅಮಿತ ಬಾಲಕೃಷ್ಣ ಶೆಟ್ಟಿ ಆಯ್ಕೆಯಾದರು. ಬೈಜುರಾಜ್ ಚುನಾವಣಾಧಿಕಾರಿಯಾಗಿ ಸಹಕರಿಸಿದರು.