ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಶತಮಾನೋತ್ಸವ, ನೂತನ ಕಟ್ಟಡ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ
ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ನ ಶತಮಾನೋತ್ಸವ ಮತ್ತು ನೂತನ ಕಟ್ಟಡದ ಉದ್ಘಾಟನೆ ನಾಳೆ ನಡೆಯಲಿದೆ. ಬೆಳಿಗ್ಗೆ ೯.೩೦ಕ್ಕೆ ಬ್ಯಾಂಕ್ನ ಅಧ್ಯಕ್ಷ ಪ್ರೇಮ್ ಕುಮಾರ್ ಕೆ.ಪಿ. ಧ್ವಜಾರೋಹಣಗೈಯ್ಯುವರು. ೧೦.೩೦ಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೂತನ ಕಟ್ಟಡವನ್ನು ಉದ್ಘಾಟಿಸುವರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಭದ್ರತಾ ಕೊಠಡಿಯನ್ನು ಜಾಯಿಂಟ್ ರಿಜಿಸ್ಟ್ರಾರ್ ಲಸಿತಾ ಕೆ. ಉದ್ಘಾಟಿಸು ವರು. ಸಭಾಂಗಣವನ್ನು ಬಿಜೆಪಿ ಅಧಕ್ಷ ಕೆ. ಸುರೇಂದ್ರನ್ ಉದ್ಘಾಟಿಸುವರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು ಜಾಯಿಂಟ್ ಡೈರೆಕ್ಟರ್ ರಮಾ ಎ. ಸಾಲಪತ್ರ ಬಿಡುಗಡೆಗೊಳಿಸುವರು. ಮಂಗಲ್ಪಾಡಿ ಪಂ. ಅಧ್ಯಕ್ಷೆ ರುಬೀನಾ ನೌಫಲ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಅಸಿ. ರಿಜಿಸ್ಟ್ರಾರ್ ಚಂದ್ರನ್ ಎ, ನಾಗೇಶ್ ಕೆ, ರವೀಂದ್ರ ಕೆ, ಲತಾ ಟಿ.ಎಂ., ಕೆ.ಆರ್. ಜಯಾನಂದ, ರೇವತಿ ಕಮಲಾಕ್ಷ, ಬೈಜುರಾಜು, ಸುನಿಲ್ ಕುಮಾರ್ ಎ. ಸಹಿತ ಹಲವರು ಶುಭ ಕೋರುವರು. ಇದೇ ವೇಳೆ ಮಾಜಿ ಅಧ್ಯಕ್ಷ ಗೋಪಾಲ ಬಂದ್ಯೋಡು, ಅಶೋಕ್ ಕುಮಾರ್ ಹೊಳ್ಳ, ಸಿ.ಟಿ. ಕೃಷ್ಣ ಹೆಬ್ಬಾರ್, ಪಿ.ಟಿ. ಸುಬ್ಬಣ್ಣ ಶೆಟ್ಟಿ, ನಿವೃತ್ತ ಕಾರ್ಯದರ್ಶಿಗಳಾದ ಅನಂತ ತುಂಗ, ರಾಮಚಂದ್ರ, ಕೆ. ದಿನಕರ್ ರಾವ್, ಭುಜಂಗ ಶೆಟ್ಟಿ ಇವರಿಗೆ ಗೌರವಾರ್ಪಣೆ ನಡೆಯಲಿದೆ.