ಮಂಗಳೂರಿಗೆ ತೆರಳಿದ ಯುವಕ ನಾಪತ್ತೆ
ಹೊಸದುರ್ಗ: ಮಂಗಳೂರಿಗೆ ಉದ್ಯೋಗ ನಿಮಿತ್ತ ತೆರಳಿದ ಮಡಿಕೈ ನಿವಾಸಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಕಾಣಿಚ್ಚಿರದ ಕೊಟ್ಟನ್ ವೆಲ್ಛಪ್ಪಾಡನ್ರ ಪುತ್ರ ದಿನೇಶನ್ (೪೭) ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ. ಕಳೆದ ತಿಂಗಳ ೨೩ರಂದ ಬೆಳಿಗ್ಗೆ ಅಂಬಲತ್ತುಕರ ಪತ್ನಿಯ ಮನೆಯಿಂದ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ತೆರಳಿದ್ದ ಇವರು ನಾಪತ್ತೆಯಾಗಿರು ವುದಾಗಿ ಪತ್ನಿ ಕೆ. ಆಶಾ ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ.