ಮಂಗಳೂರಿನಲ್ಲಿ ಕೋವಿಡ್ ಬಾಧಿಸಿ ಯುವಕ ಸಾವು: ಜಾಗ್ರತಾ ನಿರ್ದೇಶ
ಮಂಗಳೂರು: ಕೇರಳದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಜಾಗ್ರತಾ ನಿರ್ದೇಶ ಹೊರಡಿಸಿದ್ದ ಮಂಗಳೂರಿನಲ್ಲಿ ಯುವಕನೋರ್ವ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾನೆ. ಝಾರ್ಖಂಡ್ ನಿವಾಸಿಯಾದ ೪೦ರ ಹರೆಯದ ಯುವಕ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ನಿರಂತರ ಕೆಮ್ಮು ಹಾಗೂ ಉಸಿರಾಟ ಸಮಸ್ಯೆಯಿಂದಾಗಿ ಎರಡು ದಿನಗಳ ಹಿಂದೆ ಯುವಕನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಗರದಲ್ಲಿ ನಿರ್ಮಾಣ ಕಾರ್ಮಿಕನಾಗಿದ್ದ ಯುವಕನಿಗೆ ಇತ್ತೀಚೆಗೆ ಕೋವಿಡ್ ಬಾಧಿಸಿತ್ತು.
ಕೋವಿಡ್ ಬಾಧಿಸಿ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಜಾಗ್ರತೆ ನಿರ್ದೇಶ ನೀಡಿದೆ. ಕೇರಳದಲ್ಲಿ ಕೋವಿಡ್ ಹರಡುವಿಕೆ ಹಾಗೂ ಸಾವು ಸಂಭವಿಸುತ್ತಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಗಡಿಪ್ರದೇಶಗಳಲ್ಲಿ ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿತ್ತು. ಗಡಿ ದಾಟಿ ಬರುವ ಪ್ರಯಾಣಿಕರಿಗೆ ತಿಳುವಳಿಕೆಯನ್ನು ನೀಡಲಾಗಿತ್ತು.
ಸಾವು ವರದಿಯಾದುದರಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜಾಗ್ರತೆ ಹಾಗೂ ಮುನ್ನೆಚ್ಚರಿಕೆಗೆ ನಿರ್ದೇಶ ಹೊರಡಿಸಲಾಗಿದೆ. ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆ ಸೌಕರ್ಯ, ಆಮ್ಲಜನಕ ಘಟಕ, ವೆಂಟಿಲೇಟರ್ಗಳ ಸೌಕರ್ಯ ಏರ್ಪಡಿಸಲಾಗಿದೆ.