ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ವೋಯ್ಸ್ ಆಫ್ ಹೆಲ್ತ್ ಕೇರ್ ಪುರಸ್ಕಾರ
ಮಂಗಳೂರು: ಸ್ಟ್ರೋಕ್ ಸಂಬಂಧವಾದ ಅಸೌಖ್ಯಗಳಿಗೆ ನೀಡುವ ಸೇವೆಯನ್ನು ಪರಿಗಣಿಸಿ ಇಂಡ್ಯನ್ ಸ್ಟ್ರೋಕ್ ಅಸೋಸಿಯೇಶನ್‌ನೊಂದಿಗೆ ಸೇರಿ ನೀಡುವ ವೋಯ್ಸ್ ಆಫ್ ಹೆಲ್ತ್ ಕೇರ್ ಪುರಸ್ಕಾರ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಲಭಿಸಿದೆ. ನೂತನ ಚಿಕಿತ್ಸೆಗಳು, ರೋಗಿ ಕೇಂದ್ರೀಕೃತ ಪರಿಚರಣೆ ಎಂಬಿವುಗಳನ್ನು ಖಚಿತಪಡಿಸಿ ಈ ವರ್ಷ ಉತ್ತಮ ಸ್ಟ್ರೋಕ್ ರೆಡಿ ಆಸ್ಪತ್ರೆಗೆ ಈ ಪ್ರಶಸ್ತಿ ಲಭಿಸಿರುವುದು.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮೇಧಾವಿ ಪ್ರತ್ಯೂಶ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಈ ಪ್ರಶಸ್ತಿ ಲಭಿಸಿರುವುದರಲ್ಲಿ ಹೆಮ್ಮೆ ಇದೆ ಎಂದು ಆಸ್ಪತ್ರೆಯ ಮೆನೇಜಿಂಗ್ ಡೈರೆಕ್ಟರ್ ಡಾ. ರಾಜೇಶ್ ಶೆಟ್ಟಿ ನುಡಿದರು. ಆಸ್ಪತ್ರೆಯ ಅಧಿಕಾರಿಗಳ, ನೌಕರರ ಪ್ರಾಮಾಣಿಕ ಕರ್ತವ್ಯ ಈ ಪ್ರಶಸ್ತಿ ಲಭಿಸಲು ಕಾರಣವೆಂದು ಅವರು ನುಡಿದರು.
ಮಂಗಳೂರಿನ ಆರೋಗ್ಯರಂಗದ ಪ್ರಮುಖ ಕೇಂದ್ರವಾಗಿದೆ ಫಸ್ಟ್ ನ್ಯೂರೋ ಬ್ರೈನ್ ಆಂಡ್ ಸ್ಪೈನ್ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಎಂದು ಅವರು ತಿಳಿಸಿದರು. ನ್ಯೂರೋ ಸರ್ಜರಿ, ನ್ಯೂರೋಲಜಿ, ನ್ಯೂರೋ ರಿಹಾಬಿಲಿಟೇಶನ್, ಪೈನ್ ಮೆನೇಜ್ ಮೆಂಟ್ ಎಂಬೀ ರೀತಿಯ ಸೇವೆಗಳನ್ನು ಈ ಆಸ್ಪತ್ರೆಯಿಂದ ನೀಡಲಾಗುತ್ತಿದೆ. ಕ್ವಾಲಿಟಿ ಹಾಗೂ ಅಕ್ರಿಡಿಟೇಶನ್ ಇನ್‌ಸ್ಟಿಟ್ಯೂಟ್‌ಗಳ ಸ್ಟ್ರೋಕ್ ಸೆಂಟರ್ ಅಕ್ರಿಡಿಟೇಶನ್ ಇರುವ ಮಂಗಳೂರು ವಲಯದ ಏಕ ಸಂಸ್ಥೆ ಇದಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.