ಮಂಜೇಶ್ವರದಲ್ಲಿ ತ್ಯಾಜ್ಯರಾಶಿ: ತೆರವುಗೊಳಿಸದಿದ್ದರೆ ಪಂ. ಕಚೇರಿ ಬಳಿ ಹಾಕುವುದಾಗಿ ಎಸ್‌ಡಿಪಿಐ ಮುನ್ನೆಚ್ಚರಿಕೆ
ಮಂಜೇಶ್ವರ: ಪಂಚಾಯತ್ ವ್ಯಾಪ್ತಿಯ ಪೇಟೆ ಹಾಗೂ ಪರಿಸರದಲ್ಲಿ ತ್ಯಾಜ್ಯ ತುಂಬಿಕೊಂಡು ದುರ್ವಾಸನೆ ಬೀರುತ್ತಿದ್ದು, ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದೆ ಎಂದು ಎಸ್‌ಡಿಪಿಐ ದೂರಿದೆ. ಇದರಿಂದ ವ್ಯಾಪಾರಿಗಳು, ಪ್ರಯಾಣಿ ಕರು ತೊಂದರೆ ಅನುಭವಿಸುತ್ತಿದ್ದು, ದೂರು ನೀಡಿದರೂ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿಲ್ಲ. ತ್ಯಾಜ್ಯಮುಕ್ತ ಕೇರಳ ಎಂಬ ಹೆಸರಲ್ಲಿ ಲಕ್ಷಾಂತರ ರೂ. ವೆಚ್ಚಮಾಡಿ ಕಾರ್ಯಕ್ರಮ ನಡೆಸುವುದಲ್ಲದೆ ತ್ಯಾಜ್ಯ ತೆರವಿಗೆ ಪಂಚಾಯತ್ ಪ್ರಾಮಾಣಿ ಕವಾಗಿ ಯತ್ನಿಸುತ್ತಿಲ್ಲವೆಂದು ಎಸ್‌ಡಿಪಿಐ ದೂರಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಪೇಟೆ ಹಾಗೂ ಹೆದ್ದಾರಿ ಬದಿಯಲ್ಲಿನ ತ್ಯಾಜ್ಯ ತೆರವುಗೊಳಿಸದಿ ದ್ದರೆ ಪಂಚಾಯತ್ ಆವರಣದಲ್ಲಿ ಈ ತ್ಯಾಜ್ಯವನ್ನು ತಂದು ಉಪೇಕ್ಷಿಸಲಾಗು ವುದೆಂದು ಎಸ್‌ಡಿಪಿಐ ಮುನ್ನೆಚ್ಚರಿಕೆ ನೀಡಿದೆ. ಈ ಬಗ್ಗೆ ಸಂಘಟನೆಯ ಪಂ. ಸಮಿತಿ ಅಧ್ಯಕ್ಷ ಇಕ್ಬಾಲ್ ಕುಂಜತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.