ಮಂಜೇಶ್ವರದಲ್ಲಿ ಮಾದಕವಸ್ತು ಬೇಟೆ: 60ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆ
ಮಂಜೇಶ್ವರ: ಮಂಜೇಶ್ವರದಲ್ಲಿ 63 ಗ್ರಾಂ ಎಂಡಿಎಂಎ ಸಹಿತ ಓರ್ವ ಯುವಕ ಸೆರೆಗೀಡಾಗಿದ್ದಾನೆ. ಉಪ್ಪಳ ಮುಸೋಡಿ ಕುಳಕ್ಕರ ಹೌಸ್‌ನ ಅಬ್ದುಲ್ ಅಸೀಸ್ (27) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪರಿಗೆ ಲಭಿಸಿದ ಮಾಹಿತಿ ಆಧಾರದಲ್ಲಿ ನಿನ್ನೆ ರಾತ್ರಿ 7.30ರ ವೇಳೆ ಕುಂಜತ್ತೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕವಸ್ತು ವಶಪಡಿಸಲಾಗಿದೆ. ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಚಂದ್ರಕುಮಾರ್‌ರ ನೇತೃತ್ವದಲ್ಲಿ ಮಂಜೇಶ್ವರ ಇನ್‌ಸ್ಪೆಕ್ಟರ್ ಟೋಲ್ಸನ್ ಜೋಸೆಫ್ ಹಾಗೂ ತಂಡ ಕಾರ್ಯಾ ಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಪೊಲೀಸರ ತಂಡದಲ್ಲಿ ಸಿಪಿಒಗಳಾದ ಸಜಿತ್, ರಘು, ಡಾನ್ಸಾಫ್ ಟೀಂ ಸದಸ್ಯರಾದ ಎಸ್.ಐ ಅಬೂಬಕರ್, ಸೀನಿಯರ್ ಪೊಲೀಸ್ ಆಫೀಸರ್‌ಗಳಾದ ರಾಜೇಶ್, ಜಿನೇಶ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ನಿಕೇಶ್, ಸಜೇಶ್, ನಿಖಿಲ್, ಡಿವೈಎಸ್ಪಿ ಸ್ಕ್ವಾಡ್‌ನ ಸದಸ್ಯರಾದ ಎಸ್.ಐ. ನಾರಾಯಣನ್ ನಾಯರ್, ಎಎಸ್‌ಐ ಶಾಜು ಎಂಬಿವರಿದ್ದರು.