ಮಂಜೇಶ್ವರದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಜನ್ಮದಿನಾಚರಣೆ

ಮಂಜೇಶ್ವರ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಗಿಳಿವಿಂಡು ಕನ್ನಡ ಸಾಹಿತ್ಯಿಕ , ಸಾಂಸ್ಕೃತಿಕ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ೧೪೧ನೇ ಜನ್ಮದಿನಾಚರಣೆಯು ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮೊಹಮ್ಮದ್ ಆಲಿ .ಕೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.೨೫ ಭಾಷೆಗಳಲ್ಲಿ ಪಾಂಡಿತ್ಯವಿದ್ದ ಗೋವಿಂದ ಪೈಯವರ ಸಾಧನೆ,ಸಂಶೋಧನಾ ಪ್ರವೃತ್ತಿ, ಸೃಜನಶೀಲತೆ ಎಲ್ಲರಿಗೂ ಮಾದರಿಯಾದುದು ಎಂದು ಅವರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು.
ಅವರು ಮÁತನಾಡಿ ವೈಯಕ್ತಿಕ ಬದುಕಿನಲ್ಲಿಹಲವು ಸಂಕಷ್ಟಗಳನ್ನು ಅನುಭವಿಸಿದರೂ ಗೋವಿಂದ ಪೈಯವರು ತಮ್ಮ ಪೂರ್ಣ ಬದುಕನ್ನು ಕನ್ನಡಕ್ಕಾಗಿ ಮೀಸಲಿರಿಸಿದರು. ಅವರ ದೇಶಪ್ರೇಮ, ಕನ್ನಡ ಪ್ರೇಮ ಎಲ್ಲರಿಗೂ ಮಾದರಿ ಎಂದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪಿ.ಎನ್ ಮೂಡಿತ್ತಾಯ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ಕಡ್ಕ, ಗೋವಿಂದ ಪೈ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶಿವಶಂಕರ.ಪಿ, ಆಗ್ನೇಯ ಸಾಯಿ, ದಿನೇಶ ಕೆ.ಎನ್ ಶುಭ ಹಾರೈಸಿದರು. ಬಳಿಕ ಗೋವಿಂದ ಪೈ ಅವರ ಬದುಕು -ಬರಹಗಳ ಕುರಿತು ವಿಚಾರಗೋಷ್ಠಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸಮನ್ವಯಕಾರರಾಗಿದ್ದರು .ವಿದ್ಯಾಶ್ರೀ, ರಚನಾ, ದೀಕ್ಷಿತ. ಕೆ, ಸರ್ವಾಣಿ ಬಿ.ಕೆ,ಆದಿಶ್ರೀ.ಎಸ್.ಎನ್, ವಿವೇಕ್.ಎ ಇವರು ಗೋವಿಂದ ಪೈ ಅವರ ಬದುಕು, ಕವನಗಳು, ನಾಟಕ, ತಾಯಿ ಮತ್ತು ನೋ ನಾಟಕಗಳು, ಸಂಶೋಧನೆಗಳು ಮತ್ತು ಖಂಡಕಾವ್ಯಗಳ ಕುರಿತು ಪ್ರಬಂಧ ಮಂಡಿಸಿದರು. ನಂದಿನಿ ಪ್ರಾರ್ಥನೆ ಹಾಡಿದರು. ಉಪನ್ಯಾಸಕಿ ಜಯಂತಿ.ಕೆ ಸ್ವಾಗತಿಸಿದರು. ಉಪನ್ಯಾಸಕ ಡಾ.ಸುಜೇಶ್ ನಿರೂಪಿಸಿದರು. ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page