ಮಂಜೇಶ್ವರ ಉಪಜಿಲ್ಲಾ ಮಟ್ಟದ ಮಾದರಿ ಒಲಿಂಪಿಕ್ಸ್ಗೆ ಚಾಲನೆ
ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಮಾದರಿ ಒಲಿಂಪಿಕ್ಸ್ನ ಉದ್ಘಾಟನೆ ಕುರ್ಚಿಪಳ್ಳ ಜಿಎಚ್ಯುಪಿ ಶಾಲೆಯಲ್ಲಿ ಜರಗಿತು. ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ ಧ್ವಜಾರೋಹಣ ಗೈದರು. ಮಕ್ಕಳು ಪ್ರಾರ್ಥನೆ ಹಾಡಿದರು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಮಂಗಲ್ಪಾಡಿ ಪಂ. ಅಧ್ಯಕ್ಷೆ ರುಬೀನ ನೌಫಲ್ ಅಧ್ಯಕ್ಷತೆ ವಹಿಸಿದರು. ಜಿ.ಪಂ. ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್, ಮಂಗಲ್ಪಾಡಿ ಪಂ. ಸದಸ್ಯರಾದ ಮಜೀದ್ ಪಚ್ಚಂಬಳ, ವಿಜಯ ರೈ, ಟಿ.ಎ. ಅಬ್ದುಲ್ ರಹಿಮಾನ್ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯ ಉಮೇಶ್ ಸ್ವಾಗತಿಸಿ, ಸ್ಟಾಫ್ ಸೆಕ್ರೆಟರಿ ಸಂಗೀತ ವಂದಿಸಿದರು. ಜನಪ್ರತಿನಿಧಿಗಳು, ವಿವಿಧ ಸಂಘಟನಾ ಮುಖಂಡರುಗಳು ಭಾಗವಹಿಸಿದರು. ಕ್ರೀಡಾ ಕೂಟದಲ್ಲಿ ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯ ಶಾಲೆಗಳ ಸುಮಾರು 3000 ಕ್ರೀಡಾಳುಗಳು ಭಾಗವಹಿಸುವರು.