ಮಂಜೇಶ್ವರ ಉಪಜಿಲ್ಲಾ ಮಾದರಿ ಒಲಿಂಪಿಕ್ಸ್ ಸಮಾರೋಪ
ಮಂಜೇಶ್ವರ: ಉಪ ಜಿಲ್ಲಾ ಮಟ್ಟದ ಮಾದರಿ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭ ನಿನ್ನೆ ಸಂಜೆ ನಡೆಯಿತು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಮೀನಾ ಟೀಚರ್ ಉದ್ಘಾಟಿಸಿದರು. ಬ್ಲೋಕ್ ಪಂ. ಉಪಾಧಕ್ಷ ಪಿ.ಕೆ. ಮೊಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದರು. ಈ ವೇಳೆ ಒಲಿಂಪಿಕ್ಸ್‌ನ್ನು ನಡೆಸಿಕೊಟ್ಟ ಕುರ್ಚಿಪಳ್ಳ ಜಿಎಚ್‌ಯುಪಿ ಶಾಲೆಗೆ ಅಭಿನಂದನಾ ಪತ್ರ ಹಸ್ತಾಂತರಿಸಲಾಯಿತು. ಮುಖ್ಯೋಪಾಧ್ಯಾಯ ಇಸ್ಮಾಯಿಲ್ ಅಭಿನಂದನಾ ಪತ್ರ ವಾಚಿಸಿದರು. ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ, ಡಿಇಒ ದಿನೇಶ್ ಶುಭ ಹಾರೈಸಿದರು. ಜಿ.ಪಂ. ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್, ಮಂಜೇಶ್ವರ ಠಾಣಾಧಿಕಾರಿ ಮಹಮ್ಮದ್ ಇಸ್ಮಾಯಿಲ್, ಸ್ಪೋರ್ಟ್ಸ್ ಸೆಕ್ರೆಟರಿ ಸಂತೋಷ್, ಮುಖ್ಯೋಪಾಧ್ಯಾಯ ಉಮೇಶ್, ತಿರುಮಲೇಶ್ವರಿ ಟೀಚರ್, ಪಿಟಿಎ ಅಧ್ಯಕ್ಷ ಇಬ್ರಾಹಿಂ ಮೋಮಿನ್, ಉಪಾಧ್ಯಕ್ಷ ಸತೀಶ, ಸುಹರ, ನೌಶಾದ್ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಎಲ್‌ಪಿ ಮಿನಿ ಗರ್ಲ್ಸ್ ವಿಭಾಗದಲ್ಲಿ ಕುಂಜತ್ತೂರು ಎಂಎಎಲ್‌ಪಿಎಸ್, ಎಲ್‌ಪಿ ಕಿಡ್ಡೀಸ್‌ನಲ್ಲಿ ಮಜಿಬೈಲ್ ಜಿಎಲ್‌ಪಿಎಸ್, ಯುಪಿ ಕಿಡ್ಡೀಸ್‌ನಲ್ಲಿ ಕಯ್ಯಾರ್ ಡಿಬಿಎಯುಪಿಎಸ್, ಜ್ಯೂನಿಯರ್ ಗ್ರೂಪ್‌ನಲ್ಲಿ ಕೊಡ್ಲಮೊಗರು ಎಸ್.ವಿ.ವಿ.ಎಚ್.ಎಸ್, ಸೀನಿಯರ್ ಗ್ರೂಪ್‌ನಲ್ಲಿ ಉಪ್ಪಳ ಜಿಎಚ್‌ಎಸ್, ಹೈಯರ್ ಸೆಕೆಂಡರಿ ಸೀನಿಯರ್ ಬಾಯ್ಸ್‌ನಲ್ಲಿ ಜಿಎಚ್‌ಎಸ್‌ಎಸ್ ಉಪ್ಪಳ, ಎಲ್‌ಪಿ ಕಿಡ್ಡೀಸ್‌ನಲ್ಲಿ ಕುಂಜತ್ತೂರು ಎಂಎಎಲ್‌ಪಿಎಸ್ ಚಾಂಪ್ಯನ್ ಗಳಿಸಿದೆ. ಉಪ್ಪಳ ಜಿಎಚ್‌ಎಸ್‌ಎಸ್, ಕೊಡ್ಲಮೊಗರು ಎಸ್‌ವಿಎಸ್‌ಎಸ್, ಮಂಜೇಶ್ವರ ಎಸ್‌ಎಟಿಎಚ್‌ಎಸ್ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಓವರ್‌ಆಲ್ ಚಾಂಪ್ಯನ್ ಗಳಿಸಿದೆ. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಚ್‌ಎಂ ಫಾರ್ಮ್ ಕಾರ್ಯದರ್ಶಿ ಶ್ಯಾಮ್ ಭಟ್ ಸ್ವಾಗತಿಸಿ, ಸಂಗೀತ ಟೀಚರ್ ವಂದಿಸಿದರು.