ಮಂಜೇಶ್ವರ ಉಪಜಿಲ್ಲಾ ವಾಲಿಬಾಲ್ ಪಂದ್ಯಾಟ
ಕೊಡ್ಲಮೊಗರು: ಮಂಜೇಶ್ವರ ಉಪಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಕೊಡ್ಲಮೊಗರು ವಾಣೀ ವಿಜಯ ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ನಡೆಯಿತು. ಪಿಟಿಎ ಅಧ್ಯಕ್ಷ, ವರ್ಕಾಡಿ ಪಂ. ಸದಸ್ಯ ಅಬ್ದುಲ್ ಮಜೀದ್ ಉದ್ಘಾಟಿಸಿದರು. ಪ್ರಾಂಶು ಪಾಲ ವಿಜಯಕುಮಾರ್ ಶುಭ ಕೋರಿ ದರು. ಡಿಎಸ್‌ಜಿಎ ಕಾರ್ಯದರ್ಶಿ ಸಂತೋಷ್ ಕುಮಾರ್, ಪಿಟಿಎ ಸದಸ್ಯ ಉಸ್ಮಾನ್, ಮಾತೃಸಂಘದ ಅಧ್ಯಕ್ಷೆ ರಿಯಾನ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಉದಯ ಕುಮಾರ್ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಬಿ. ವಂದಿಸಿದರು. ಕಿಶೋರ್ ನಿರೂಪಿ ಸಿದರು.
ಆತಿಥೇಯ ಶಾಲೆಯ ಹುಡುಗರ ಮತ್ತು ಹುಡುಗಿಯರ ತಂಡ ಸಬ್ ಜ್ಯೂನಿಯರ್ ವಿಭಾಗ ಮತ್ತು ಜ್ಯೂನಿ ಯರ್ ವಿಭಾಗದಲ್ಲಿ ಪ್ರಥಮ ಸ್ಥಾನ, ಸೀನಿಯರ್ ಹುಡುಗರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಧರ್ಮತ್ತಡ್ಕ ಎಸ್‌ಡಿಪಿಎಚ್‌ಎಸ್‌ನ ಜ್ಯೂನಿಯರ್ ವಿಭಾಗದ ಹುಡುಗರ ತಂಡ ದ್ವಿತೀಯ ಸ್ಥಾನ, ಸೀನಿಯರ್ ವಿಭಾಗದ ಹುಡುಗರ ತಂಡ ಪ್ರಥಮ ಸ್ಥಾನ, ಇನ್‌ಫಾಂಟ್ ಜೀಸಸ್ ಮಂಜೇಶ್ವರದ ಹುಡುಗಿಯರ ತಂಡ ಜ್ಯೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.