ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವ ಸಮಾಪ್ತಿ
ಮೀಯಪದವು: ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವ ಸಮಾ ರೋಪ ಕಾರ್ಯಕ್ರಮ ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಮೀಂಜ ಪಂ. ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಉದ್ಘಾಟಿಸಿದರು. ಬ್ಲೋಕ್ ಪಂ. ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಪಿ.ಕೆ, ಸದಸ್ಯರಾದ ಮೊಯ್ದೀನ್ ಕುಂಞಿ, ಅಬ್ದುಲ್ ಹಮೀದ್ ಶುಭ ಕೋರಿದರು. ಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ. ಬಹುಮಾನ ವಿತರಿಸಿದರು. ಉಪ ಜಿಲ್ಲಾ ವಿದ್ಯಾಧಿಕಾರಿ ರಾಜ ಗೋಪಾಲ ಕೆ., ವಂ| ಸ್ವಾಮಿ ಬಾಸಿಲ್ ವಾಸ್ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಕೃಷ್ಣವೇಣಿ ಸ್ವಾಗತಿಸಿ, ರೋಮನ್ ಡಿಸೋಜ ವಂದಿಸಿದರು. ಬಶೀರ್, ಪ್ರದೀಪ್ ನಿರ್ವಹಿಸಿದರು.
ವಿಜ್ಞಾನ ಮೇಳದ ಎಲ್.ಪಿ. ವಿಭಾಗದಲ್ಲಿ ಎಂ.ಎ.ಎಲ್.ಪಿ.ಎಸ್ ಕುಂಜತ್ತೂರು ಪ್ರಥಮ, ಸೈಂಟ್ಸ್ ಜೋಸೆಫ್ ಎ.ಯು.ಪಿ.ಎಸ್ ಕಳಿಯೂರು ದ್ವಿತೀಯ. ಯು.ಪಿ ವಿಭಾಗದಲ್ಲಿ ಜಿ.ಎಚ್.ಎಸ್.ಎಸ್ ಹೇರೂರು ಮೀಪ್ರಿ ಪ್ರಥಮ, ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ದ್ವಿತೀಯ. ಹೈಸ್ಕೂಲ್ ವಿಭಾಗದಲ್ಲಿ ಜಿ.ಎಚ್.ಎಸ್.ಎಸ್ ಹೇರೂರು ಮೀಪ್ರಿ ಪ್ರಥಮ, ಎಸ್.ಡಿ.ಪಿ.ಎಚ್.ಎಸ್ ಧರ್ಮತಡ್ಕ ದ್ವಿತೀಯ, ಜಿ.ಎಚ್.ಎಸ್. ಎಸ್.ಮಂಗಲ್ಪಾಡಿ ದ್ವಿತೀಯ, ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಸ್.ಎ.ಟಿ. ಎಚ್. ಎಸ್.ಮಂಜೇಶ್ವರ ಪ್ರಥಮ ಜಿ.ಹೆಚ್.ಎಸ್.ಎಸ್ ಪೈವಳಿಕೆ ನಗರ ದ್ವಿತೀಯ, ಗಣಿತ ಮೇಳದ ಎಲ್.ಪಿ. ವಿಭಾಗದಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ಪ್ರಥಮ, ಎಂ.ಎ.ಎಲ್. ಪಿ.ಎಸ್ ಕುಂಜತ್ತೂರು ದ್ವಿತೀಯ, ಎಸ್.ಎಸ್.ಎ.ಎಲ್.ಪಿ.ಎಸ್ ಕನಿಯಾ ಲ ದ್ವಿತೀಯ, ಯು.ಪಿ. ವಿಭಾಗದಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ಪ್ರಥಮ, ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ ದ್ವಿತೀಯ, ಹೈಸ್ಕೂಲ್ ವಿಭಾಗದಲ್ಲಿ ಎಸ್.ಡಿ.ಪಿ.ಎಚ್.ಎಸ್ ಧರ್ಮತಡ್ಕ ಪ್ರಥಮ, ಎಸ್.ಎ.ಟಿ. ಎಚ್.ಎಸ್ ಮಂಜೇಶ್ವರ ದ್ವಿತೀಯ, ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ ಪ್ರಥಮ, ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ದ್ವಿತೀಯ, ಸಮಾಜ ವಿಜ್ಞಾನ ಮೇಳದ ಯು.ಪಿ.ವಿಭಾಗದಲ್ಲಿ ಸೈಂಟ್ ಜೋಸೆಫ್ ಎ.ಯು.ಪಿ.ಎಸ್ ಕಳಿಯೂರು ಪ್ರಥಮ, ಎಸ್.ಎಸ್.ಬಿ. ಎ.ಯು.ಪಿ.ಎಸ್ ಐಲ ದ್ವಿತೀಯ, ಎಲ್.ಪಿ.ವಿಭಾಗದಲ್ಲಿ ಎಸ್.ಎಸ್.ಬಿ.ಎ. ಯು.ಪಿ.ಎಸ್ ಐಲ ಪ್ರಥಮ, ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ಪ್ರಥಮ, ವಿ.ಎ.ಎಲ್.ಪಿ.ಎಸ್ ಪಾವೂ ರು ದ್ವಿತೀಯ, ಹೈಸ್ಕೂಲ್ ವಿಭಾಗದಲ್ಲಿ ಎಸ್.ಡಿ.ಪಿ.ಎಚ್.ಎಸ್ ಧರ್ಮತಡ್ಕ ಪ್ರಥಮ, ಜಿ.ಎಚ್.ಎಸ್. ಎಸ್.ಪೈವಳಿಕೆ ನಗರ ದ್ವಿತೀಯ, ಎಚ್.ಎಸ್.ಎಸ್. ವಿಭಾಗದಲ್ಲಿ ಎಸ್.ಎ.ಟಿ.ಎಚ್.ಎಸ್ ಮಂಜೇಶ್ವರ ಪ್ರಥಮ, ಜಿ.ಎಚ್.ಎಸ್.ಎಸ್.ಪೈವಳಿಕೆ ನಗರ ದ್ವಿತೀಯ, ವೃತ್ತಿ ಪರಿಚಯ ಮೇಳದ ಎಲ್.ಪಿ.ವಿಭಾಗದಲ್ಲಿ ಎ.ಯು.ಪಿ.ಎಸ್ ಬಾಕ್ರಬೈಲ್ ಪ್ರಥಮ, ಜಿ.ಎಲ್.ಪಿ.ಎಸ್ ಕುಳೂರು ದ್ವಿತೀಯ, ಯು.ಪಿ. ವಿಭಾಗ ಎ.ಯು.ಪಿ.ಎಸ್ ಬಾಕ್ರಬೈಲ್ ಪ್ರಥಮ, ಎ.ಯು.ಪಿ.ಎಸ್ ಆನೆಕಲ್ಲು ದ್ವಿತೀಯ, ಎಸ್.ಆರ್.ಎ. ಯು.ಪಿ.ಎಸ್ ಕುಬಣೂ ರು ದ್ವಿತೀಯ, ವಿ.ಎ.ಯು.ಪಿ.ಎಸ್. ಮೀಯಪದವು ದ್ವಿತೀಯ. ಹೈಸ್ಕೂಲ್ ವಿಭಾಗ ಜಿ.ಎಚ್.ಎಸ್. ಕಡಂಬಾರು ಪ್ರಥಮ, ಎಸ್.ಡಿ.ಪಿ.ಎಚ್.ಎಸ್. ಧರ್ಮತಡ್ಕ ದ್ವಿತೀಯ, ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಸ್.ಎ.ಟಿ. ಎಚ್.ಎಸ್. ಮಂಜೇಶ್ವರ ಪ್ರಥಮ, ಎಸ್.ಡಿ.ಪಿ. ಎಚ್.ಎಸ್ ಧರ್ಮತಡ್ಕ ದ್ವಿತೀಯ, ಐಟಿ ಮೇಳದ ಯು.ಪಿ ವಿಭಾಗದಲ್ಲಿ ಡಿ.ಬಿ.ಎ.ಯು.ಪಿ.ಎಸ್ ಕಯ್ಯಾರ್ ಪ್ರಥಮ, ಎಸ್.ಆರ್.ಎ. ಯು.ಪಿ.ಎಸ್ ಕುಬಣೂರು ದ್ವಿತೀಯ. ಹೈಸ್ಕೂಲ್ ವಿಭಾಗದಲ್ಲಿ ಸಿರಾಜುಲ್ ಹುದ ಇ.ಎಂ.ಎಚ್.ಎಸ್ ಉದ್ಯಾವರ ಪ್ರಥಮ, ಎಸ್.ಎ.ಟಿ.ಎಚ್.ಎಸ್. ಮಂಜೇಶ್ವರ ದ್ವಿತೀಯ, ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಸ್.ಎ.ಟಿ. ಎಚ್.ಎಸ್. ಮಂಜೇಶ್ವರ ಪ್ರಥಮ, ಜಿ.ಎಚ್.ಎಸ್.ಎಸ್.ಪೈವಳಿಕೆ ನಗರ ದ್ವಿತೀಯ ಸ್ಥಾನ ಗಳಿಸಿದೆ.