ಮಂಜೇಶ್ವರ ಉಪಜಿಲ್ಲಾ ಶಾಲಾ ಒಲಿಂಪಿಕ್ಸ್ ಸ್ವಾಗತ ಸಮಿತಿ ಸಮಾಲೋಚನಾ ಸಭೆ
ಉಪ್ಪಳ: ಈ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಒಲಿಂಪಿಕ್ಸ್‌ನ ಸ್ವಾಗತ ಸಮಿತಿ ಸಮಾಲೋಚನಾ ಸಭೆ ನಿನ್ನೆ ಕುರ್ಚಿಪಳ್ಳ ಜಿಎಚ್‌ಯುಪಿ ಶಾಲೆಯಲ್ಲಿ ಜರಗಿತು. ಮಂಗಲ್ಪಾಡಿ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯ ಉಮೇಶ್ ಸ್ವಾಗತಿಸಿದರು. ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ ಪ್ರಸ್ತಾಪಿಸಿದರು. ಎಚ್.ಎಂ. ಫಾರ್ಮ್ ಸಂಚಾಲಕ ಶ್ಯಾಮ್ ಭಟ್, ಉಪಜಿಲ್ಲಾ ಸ್ಪೋರ್ಟ್ಸ್ ಸೆಕ್ರೆಟರಿ ಸಂತೋಷ್ ಕುಮಾರ್ ಮಾತನಾಡಿದರು. ಇಬ್ರಾಹಿಂ ಮೋಮಿನ್, ಸತೀಶ್, ಸುಹರಾ, ತಿರುಮಲೇಶ್ವರಿ ಸಹಿತ ಹಲವರು ಮಾತನಾಡಿದರು.