ಮಂಜೇಶ್ವರ ಎಸ್.ಎ.ಟಿ ಶಾಲೆ ಶತಮಾನೋತ್ಸವ ಸಂಭ್ರಮ: ವಿವಿಧ ಕಾರ್ಯಕ್ರಮಗಳ ಉದ್ಘಾಟನೆ

ಮಂಜೇಶ್ವರ : 1925 ರಲ್ಲಿ ಸರ್ವರಿಗೂ ಸಮಾನವಾದ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಶಿಕ್ಷಣದ ಜೊತೆಗೆ ಸಂಸ್ಕೃತ ಶಿಕ್ಷಣವನ್ನು ಉಚಿತವಾಗಿ ನೀಡುವ ಉದ್ದೇಶದಿಂದ ಆರಂಭಗೊAಡ ಮಂಜೇಶ್ವರ ಎಸ್ ಎ ಟಿ ಶಾಲೆ ಪ್ರಸ್ತÄತ ನರ್ಸರಿಯಿಂದ ತೊಡಗಿ ಪ್ಲಸ್-ಟು ತರಗತಿಯವರೆಗೆ ಸುಮಾರು 2200 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿ ದ್ದಾರೆ. ಸುಮಾರು 10 ಎಕರೆ ಸ್ಥಳದಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಈ ವಿದ್ಯಾಸಂಸ್ಥೆಗಳು ಶೈಕ್ಷಣಿಕ ಸೇವೆ ಒದಗಿಸುತ್ತಿದೆ.
ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿರÀÄವ ಶಾಲೆಯಲ್ಲಿ
ಶಾಲಾ ಶತಮಾನೋತ್ಸವ ಸಮಿತಿ ಮತ್ತು ಶಾಲಾ ಮಟ್ಟದ ಉಪಸಮಿತಿ ಗಳನ್ನು ರೂಪೀಕರಿಸಲಾಗಿದೆ. ಇದರ ಭಾಗವಾಗಿ ಶತಮಾನೋತ್ಸವದ ಉದ್ಘಾ ಟನಾ ಸಮಾರಂಭದ ಸಂದರ್ಭದಲ್ಲಿ ಶೈಕ್ಷಣಿಕ ಸೇವೆಗೆ ಸಮರ್ಪಿಸಲ್ಪಟ್ಟ ‘ಅನಂತ’ ವಾಚನಾಲಯ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಶ್ರೀ ಅನಂತೇಶ್ವರ ದೇವಸ್ಥಾನ ಮಂಜೇಶ್ವರ ಇದರ ಅಧ್ಯಕ್ಷ ಟಿ ಗಣಪತಿ ಪೈ ದೀಪ ಪ್ರಜ್ವಲನೆ ನಡೆಸಿ, ಧ್ವನಿ ಸುರುಳಿ ಬಿಡುಗಡೆಗೊಳಿಸಿದರು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಿ.ಎ ಸುನಿಲ್ ಭಟ್ ಎಂ. ರವರ ಅಧ್ಯಕ್ಷತೆಯಲ್ಲಿ ಶಾಸಕ ಎ ಕೆ ಎಂ ಅಶ್ರಫ್ ಉದ್ಘಾಟಿಸಿ ದರು. ಕಾಸರಗೋಡು ನಿವೃತ ಶಿಕ್ಷಣ ಉಪ ನಿರ್ದೇಶಕ ನಂದಿಕೇಶನ್ ಎನ್. ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಶ್ರೀ ದಿನೇಶ್ ವಿ ಅನಂತ ವಾಚನಾಲಯ ವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ ಆರ್ ಜಯಾನಂದ, ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ, ಕೃಷ್ಣ ಮೂರ್ತಿ ಎಂ. ಎಸ್, ಮಂಜೇಶ್ವರ ಸಹಾಯಕ ಶಿಕ್ಷಣಾಧಿಕಾರಿ ಜಿತೇಂದ್ರ ಎಸ್ ಎಚ್, ವಾರ್ಡ್ ಸದಸ್ಯೆ ಸುಪ್ರಿಯಾ ಶೆಣೈ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡರು.

Leave a Reply

Your email address will not be published. Required fields are marked *

You cannot copy content of this page