ಮಂಜೇಶ್ವರ: ಓಲ್ಡ್ ಎಂಸಿಸಿ ರಸ್ತೆಯಲ್ಲಿ ಸಂಚಾರ ನಿಯಂತ್ರಣ
ಮಂಜೇಶ್ವರ: ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಓಲ್ಡ್ ಎಂಸಿಸಿ ಪಿಡಬ್ಲ್ಯುಡಿ ರಸ್ತೆಯಲ್ಲಿ ಆಂಶಿಕವಾಗಿ ಸಾರಿಗೆ ಸಂಚಾರ ನಿಯಂತ್ರಣ ಇಂದಿನಿಂದ ಈ ತಿಂಗಳ ೨೫ರವರೆಗೆ ಹೇರಲಾಗಿದೆ. ರಸ್ತೆ ಅಗಲಗೊಳಿಸುವ ಕಾಮಗಾರಿ ನಡೆ ಯುವ ಹಿನ್ನೆಲೆಯಲ್ಲಿ ಘನವಾಹನಗಳಿಗೆ ಈ ರಸ್ತೆಯಲ್ಲಿ ಸಂಚಾರ ನಿಯಂತ್ರಣ ಏರ್ಪಡಿಸಲಾಗಿದೆ ಎಂದು ಲೋಕೋಪಯೋಗಿ ವಿಭಾಗ ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ.