ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನಡಾವಳಿ ಉತ್ಸವ ಮಾ. 23ರಂದು
ಮಂಜೇಶ್ವರ: ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನಡಾವಳಿ ಉತ್ಸವ ಮಾ.23ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರಂಗವಾಗಿ 18ರಂದು ಬೆಳಿಗ್ಗೆ 7.30ಕ್ಕೆ ಗಣಪತಿ ಹೋಮ, ಬೆಳಿಗ್ಗೆ 9ರ ಒಳಗೆ ಗೊನೆಮುಹೂರ್ತ, 23ರಂದು ಬೆಳಿಗ್ಗೆ 8.30ಕ್ಕೆ ಶ್ರೀ ಕ್ಷೇತ್ರ ಭಂಡಾರ ನಿಲಯದಿಂದ ಭಂಡಾರ ಹೊರಡುವುದು, 10ರಿಂದ ಭಜನೆ ಪ್ರಾರಂಭ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಕುಣಿತ ಭಜನೆ, 8ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಿಶ್ವ ನಾಥ ಕುದುರು ಅಧ್ಯಕ್ಷತೆ ವಹಿಸುವರು. ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಕೃಷ್ಣಾ.ಎನ್.ಉಚ್ಚಿಲ್ ಉದ್ಘಾಟಿಸು ವರು. ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ದೀಪ ಪ್ರಜ್ವಲನೆಗೊಳಿ ಸುವರು. ವಿವಿಧ ವಲಯಗಳ ಮುಖಂಡರಾದ ಗೋಪಾಲ.ಎಂ ಬಂದ್ಯೋಡು, ಮೋಹನ ಶೆಟ್ಟಿ ತೂಮಿನಾಡು, ಕೆ.ಕೆ ಶೆಟ್ಟಿ ಮುಂಡಪ್ಠ್ಣ್ಢ, ಮಹಾಬಲೇಶ್ವರ ಭಟ್, ಜನಾರ್ಧನ ಮಲ್ಪೆ, ಗಣೇಶ್ ಬಜಾಲ್, ಉಮೇಶ್ ಸಲ್ಯಾನ್, ಬಾಬು.ಟಿ ಬಂಗೇರ ಮುಂಬೈ, ವೈ.ಬಿ ಸುಂದರ್ ಇರಾ, ಪದ್ಮನಾಭ ಕಡಪ್ಪರ, ಮೋತಿಕಿರಣ್ ಉಪೇಂದ್ರ ಉಪಸ್ಥಿತರಿರುವರು. ದೇವದಾಸ್.ವಿ, ಸೋಮಶೇಖರ. ಎಂ.ಎನ್ ಭಾಗವ ಹಿಸುವರು. 9ರಿಂದ ಭರತನಾಟ್ಯ, ಲಘು ಶಾಸ್ತಿçÃಯ ಹಾಗೂ ಜಾನಪದ ನೃತ್ಯ, 11.30ರಿಂದ ನಡಾವಳಿ ಉತ್ಸವ ಪ್ರಾರಂಭ, 24ರಂದು ಬೆಳಿಗ್ಗೆ 8ಕ್ಕೆ ಭಂಡಾರ ಇಳಿಯುವುದು ನಡೆಯಲಿದೆ.