ಮಂಜೇಶ್ವರ ಚುನಾವಣಾ ತರಕಾರು ಪ್ರಕರಣ: ವಿಚಾರಣೆ ಆ. 17ಕ್ಕೆ ಮುಂದೂಡಿಕೆ
ಕಾಸರಗೋಡು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣಾ ತರಕಾರು ಪ್ರಕರಣದ ವಿಚಾರಣೆಯನ್ನು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಅಗೋಸ್ತ್ 17ಕ್ಕೆ ಮುಂದೂಡಿದೆ.
ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ಕಳೆದ ಬಾರಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದ ಕೆ. ಸುರೇಂದ್ರನ್ ಸೇರಿದಂತೆ ಬಿಜೆಪಿ ಯ ಆರು ಮಂದಿಯನ್ನು ಈ ಪ್ರಕರ ಣದಲ್ಲಿ ಆರೋಪಿಗಳನ್ನಾಗಿ ಹೆಸರಿಸ ಲಾಗಿದೆ. ಅಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದ ಕೆ. ಸುಂದರರನ್ನು ಬೆದರಿಸಿ ಎರಡೂವರೆ ಲಕ್ಷ ರೂ. ಹಾಗೂ ಮೊಬೈಲ್ ಫೋನ್ ನೀಡಿ ಅವರ ನಾಮಪತ್ರ ಹಿಂತೆಗೆದು ಕೊಳ್ಳುವಂತೆ ಮಾಡಲಾಗಿತ್ತೆಂದು ಆರೋಪಿಸಿ ನೀಡಲಾದ ದೂರಿನಂತೆ ಆರು ಮಂದಿ ವಿರುದ್ಧ ಪೊಲೀಸರು ಮೊದಲು ಪ್ರಕರಣ ದಾಖಲಿಸಿ ಕೊಂಡಿದ್ದರು. ನಂತರ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಗಿತ್ತು. ಅದರಂತೆ ಕ್ರೈಂ ಬ್ರಾಂಚ್ ತನಿಖೆ ನಡೆಸಿ ನ್ಯಾಯಾ ಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದೊಂದು ವಾಸ್ತವರ ಹಿತವಾದ ಪ್ರಕರಣವಾಗಿದೆಯೆಂದೂ, ಕಾನೂನುಪ್ರಕಾರ ಇದು ನೆಲೆಗೊಳ್ಳ ದೆಂದೂ, ಆದ್ದರಿಂದ ಆ ಪ್ರಕರಣ ರದ್ದುಪಡಿಸಬೇಕೆಂದು ಕೋರಿ ಈ ಪ್ರಕರಣದ ಆರೋಪಿಗಳಾಗಿ ಹೆಸರಿಸಲಾದ ಕೆ. ಸುರೇಂದ್ರನ್ ಸೇರಿ ಆರು ಮಂದಿ ನ್ಯಾಯಾಲಯದಲ್ಲಿ ಬಳಿಕ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನ್ಯಾಯಾಲಯದಲ್ಲಿ ಆರಂಭಗೊಂಡಿದ್ದು, ವಿಚಾರಣೆಯನ್ನು ಅಗೋಸ್ತ್ ೧೭ಕ್ಕೆ ಮುಂದೂಡಿದೆ.