ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಐಪಿ ಮೊಟಕು : ಶಾಸಕರಿಂದ ಸಚಿವೆಗೆ ಪತ್ರ
ಉಪ್ಪಳ: ದಿನಂಪ್ರತಿ ಹಲವಾರು ರೋಗಿಗಳು ಚಿಕಿತ್ಸೆಗಾಗಿ ತಲುಪುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಸಾಕಷ್ಟು ಡಾಕ್ಟರ್‌ಗಳಿಲ್ಲವೆಂಬ ಕಾರಣದಿಂದ ಐಪಿ, ತುರ್ತು ವಿಭಾಗ ನಿಲ್ಲಿಸಲಿರುವ ಆರೋಗ್ಯ ಇಲಾಖೆಯ ಯತ್ನ ಪ್ರತಿಭಟನಾರ್ಹವೆಂದು ಮಂಜೇಶ್ವರ ತಾಲೂಕು ಆಸ್ಪತ್ರೆ ಬಗ್ಗೆ ಸರಕಾರ ತೋರುವ ಅವಗಣನೆ ಕೊನೆಗೊಳಿಸಬೇಕೆಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ರಾತ್ರಿ ಕಾಲದಲ್ಲಿ ಸೇವೆ ಮೊಟಕುಗೊಳಿಸಲಿರುವ ಯತ್ನವನ್ನು ಹೊರತುಪಡಿಸಬೇಕೆಂದು ಆಗ್ರಹಿಸಿ ಆರೋಗ್ಯ ಇಲಾಖೆ ಸಚಿವೆ ವೀಣಾ ಜಾರ್ಜ್‌ರಿಗೂ, ಆರೋಗ್ಯ ಇಲಾಖೆ ನಿರ್ದೇಶಕ ಡಾ| ರೀನಾ ಕೆ.ಜೆಯವರಿಗೂ ಶಾಸಕರು ಪತ್ರ ರವಾನಿಸಿದ್ದಾರೆ. ಅಲ್ಲದೆ ದೂರವಾಣಿ ಯಲ್ಲೂ ಮಾತನಾಡಿದ್ದಾರೆ.
ಎಂಟು ಡಾಕ್ಟರ್‌ಗಳ ಅಗತ್ಯವಿರುವ ತಾಲೂಕು ಆಸ್ಪತ್ರೆಯಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಮಂಜೂರು ಮಾಡಿದ ಓರ್ವ ಡಾಕ್ಟರ್ ಸಹಿತ ಡಾಕ್ಟರ್ ಮಾತ್ರವೇ ಈಗ ಇರುವುದು. ಇದನ್ನು ಉಪಯೋಗಿಸಿ ಕೊಂಡು ರಾತ್ರಿ ಕಾಲದಲ್ಲಿ ಇನ್ನು ಸೇವೆ ನಡೆಸಲು ಸಾಧ್ಯವಿಲ್ಲವೆಂದೂ, ಆದ್ದರಿಂದ ಅ. ೩೦ರಿಂದ ರಾತ್ರಿ ವೇಳೆಯ ಐಪಿ, ತುರ್ತುವಿಭಾಗವನ್ನು ನಿಲ್ಲಿಸಲಾಗುವು ದೆಂದು ಆರೋಗ್ಯ ವಿಭಾಗ ಮಂಜೇಶ್ವರ ಬ್ಲೋಕ್ ಪಂ. ಕಾರ್ಯದರ್ಶಿಗೆ ತಿಳಿಸಿದೆ. ಇದರ ವಿರುದ್ಧ ಶಾಸಕರು ಆರೋಗ್ಯ ಸಚಿವೆ, ಆರೋಗ್ಯ ನಿರ್ದೇಶಕರಿಗೆ, ಜಿಲ್ಲಾ ವೈದ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ.
ಇದೇ ವೇಳೆ ಮಂಗಲ್ಪಾಡಿ ಜನಪರ ವೇದಿ ಸಚಿವ ಅಹಮ್ಮದ್ ದೇವರ್ ಕೋವಿಲ್‌ಗೂ ಈ ಆಸ್ಪತ್ರೆಯ ಬಗ್ಗೆ ಮನವಿ ನೀಡಿದೆ. ಜನಪರ ವೇದಿಯ ಸಿದ್ದಿಖ್ ಕೈಕಂಬ, ಅಬುತಮಾಂ, ಮೊಹಮ್ಮದ್ ಕೈಕಂಬ, ಅಶ್ರಫ್ ಮೂಸ, ಕೆ.ಎಫ್. ಇಕ್ಭಾಲ್, ಐಎನ್‌ಎಲ್ ಮುಖಂಡ ಫಕ್ರುದ್ದೀನ್ ಜೊತೆಗೆ ಮನವಿ ನೀಡಿದ್ದಾರೆ.