ಮಂಜೇಶ್ವರ ಪೊಲೀಸ್ ಠಾಣೆಗೆ ಕಾಂಗ್ರೆಸ್ ಮುತ್ತಿಗೆ
ಮಂಜೇಶ್ವರ : ನವಕೇರಳ ಸಭೆಯ ನೆಪದಲ್ಲಿ ಮುಖ್ಯಮಂತ್ರಿಯ ಅಂಗರಕ್ಷಕರು, ಪೊಲೀಸರು ಮತ್ತು ಸಿಪಿಎಂ ಕಾರ್ಯಕರ್ತರಿಂದ ಕೆಎಸ್ ಯು, ಯೂತ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕೆಪಿಸಿಸಿ ಆಹ್ವಾನದಂತೆ ರಾಜ್ಯದ ಕಾಂಗ್ರೆಸ್ ಮಂಡಲ ಸಮಿತಿಗಳ ಜಂಟಿ ನೇತೃತ್ವದಲ್ಲಿ ಎಲ್ಲಾ ಪೊಲೀಸ್ ಗಳಿಗೆ ನಡೆದ ಮಾರ್ಚ್ನಲ್ಲಿ ಮಂಜೇಶ್ವರ, ವರ್ಕಾಡಿ, ಮೀಂಜ ಹಾಗೂ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ಪೋಲೀಸ್ ಠಾಣಾ ಮಾರ್ಚ್ ಜರುಗಿತು. ಮಂಜೇಶ್ವರ ಮಂಡಲ ಕಾಂಗ್ರೆಸ್ ಅಧ್ಯಕ್ಷ ಅಹ್ಮದ್ ಮನ್ಸೂರ್ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸುಂದರ ಆರಿಕ್ಕಾಡಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೇರಳದ ಪಿಣರಾಯಿ ವಿಜಯನ್ ಸರಕಾರದ ನವಕೇರಳ ಸಭೆ ಪರಾಜಯಗೊಂಡಿದ್ದು, ಯಾತ್ರೆಗೆ ರಾಜ್ಯದಾದ್ಯಂತ ಪ್ರತಿಭಟನೆಗಳು ಮಹಾಪೂರವೇ ಗೋಚರಿಸಿದೆ, ಇದರಿಂದ ಮಾರ್ಕ್ಸಿಸ್ಟರು ಪೊಲೀಸ್ ಹಾಗೂ ಗೂಂಡಾಗಳನ್ನು ಬಳಸಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ದೌರ್ಜನ್ಯಕ್ಕಿಳಿದಿದ್ದು ನಾಚಿಗೇಡು ಎಂದು ಹೇಳಿದರು. ಕಾಸರಗೋಡು ಜಿ.ಪಂ.ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕ ಭಾಷಣಗೈದರು. ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಓಂಕೃಷ್ಣ, ಪ್ರಧಾನ ಕಾರ್ಯದರ್ಶಿ ಇರ್ಷಾದ್ ಮಂಜೇಶ್ವರ, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತಿ ಕೆ, ಡಿಕೆಟಿಎಫ್ ಬ್ಲಾಕ್ ಅಧ್ಯಕ್ಷ ಹಮೀದ್ ಕಣಿಯೂರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಜಗದೀಶ್ ಮೂಡಂಬೈಲು, ಖಲೀಲ್ ಬಜಾಲ್, ಮೊಹಮ್ಮದ್ ಬೆಜ್ಜ, ಸದಾಶಿವ.ಕೆ, ಅಝೀಝ್ ಕಲ್ಲೂರು, ಎಸ್.ಅಬ್ದುಲ್ ಖಾದರ್ ಹಾಜೀ, ರಜತ್ ವೇಗಸ್, ಮಹಾರಾಜ, ಹಮೀದ್ ಕಣಿಯೂರು, ಮೊಹಮ್ಮದ್ ಶಾಫೀ ತಲೇಕಳ, ರಂಜಿತ್ ಮಂಜೇಶ್ವರ, ಮೆಹಮೂದ್ ಕೆದುಂಬಾಡಿ, ಕಾಯಿಂಞ ಹಾಜೀ ತಲೇಕಳ, ಉಮ್ಮರ್ ಬೆಜ್ಜ, ವಿಕ್ಟರ್ ವೇಗಸ್, ಜಿ.ರಾಮ್ ಭಟ್, ಯಾಕೂಬ್ ಕೋಡಿ, ಪಳ್ಳಿಕುಂಞ ತಲೇಕಳ, ಅಬ್ದುಲ್ ಖಾದರ್ ಕೋಡಿ, ರಾಜೇಶ್ ಡಿ.ಸೋಜ, ಕೆ ಕೆ.ಅಶ್ರಫ್ ಕೆದಕ್ಕಾರ್, ಆರಿಸ್ ಮಂಗಲ್ಪಾಡಿ, ಅಶ್ರಫ್ ಕಣಿಯೂರ್, ಸಿದ್ದೀಕ್ ಮಂದ್ರಿ, ಹುಸೈನ್ ಮಚ್ಚಂಪಾಡಿ, ಅಬ್ದುಲ್ ಖಾದರ್ ಮೋನು ಮುಂತಾದವರು ಉಪಸ್ಥಿತರಿದ್ದರು. ಮೀಂಜ ಮಂಡಲ ಕಾಂಗ್ರೆಸ್ ಅಧ್ಯಕ್ಷ ದಾಮೋದರ ಮಾಸ್ತರ್ ವಂದಿಸಿದರು.