ಮಂಜೇಶ್ವರ: ವಿಜ್ಞಾನೋತ್ಸವ ಉದ್ಘಾಟನೆ
ಮಂಜೇಶ್ವರ: ‘ವಿದ್ಯಾರ್ಥಿಗಳ ವೈಜ್ಞಾನಿಕ,ತಂತ್ರಜ್ಞಾನ, ಸಾಮಾಜಿಕ,ಮತ್ತು ಕಲಾನೈಪುಣ್ಯ ಪ್ರತಿಭೆಗಳನ್ನು ಒರೆಗೆ ಹಚ್ಚುವ ಹಾಗೂ ಗುರುತಿಸುವ ವಿಜ್ಞಾ ನೋತ್ಸವ ನಮ್ಮ ದೇಶದ ಭವಿಷ್ಯದ ವಿಜ್ಞಾನಿಗಳನ್ನಾಗಿದೆ ರೂಪಿಸುವುದು. ಶಾಸ್ತ್ರೋತ್ಸವ ಎಂದಾಗ ನೆನಪಾಗುವುದು ನಮ್ಮ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಅವರನ್ನು ಗ್ರಾಮೀಣ ಪ್ರತಿಭೆ ಯಾದ ಅವರು ವಿಜ್ಞಾನಿಯಾಗಿ ಬೆಳೆದು ಬಂದ ಬಗೆ ಬೆರಗು ಮೂಡಿ ಸುವಂತದ್ದು ಅಂತಹ ವಿಜ್ಞಾನಿಗಳ ರೂಪೀಕರಣಕ್ಕೆ ಇಂತಹ ಸ್ಪರ್ಧೆಗಳು ವೇದಿಕೆಯಾಗಲಿವೆ ಎಂದು ಎ.ಕೆ.ಎಂ ಅಶ್ರಫ್ ನುಡಿದರು. ಅವರು ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಆರಂಭಗೊAಡ ಮಂ ಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವ ಉದ್ಘಾಟೆಸಿ ಮಾತ ನಾಡುತ್ತಿದ್ದರು. ಮಂಜೇಶ್ವರ ಪಂ ಚಾಯತ್ ಅಧ್ಯಕ್ಷ ಜೀನ್ ಲವೀನ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ನ ವರ್ಕಾಡಿ ಡಿವಿಜನ್ ಸದಸ್ಯೆ ಕಮಲಾಕ್ಷಿ .ಕೆ.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮಂಜೇಶ್ವರ ಉಪಜಿಲ್ಲಾ ಪ್ರಭಾರ ಸಹಾಯಕ ವಿದ್ಯಾಧಿಕಾರಿಗಳಾದ ಜಿತೇಂದ್ರರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಮಂಜೇಶ್ವರ ಪಂಚಾಯತ್ ಉಪಾಧ್ಯಕ್ಷರಾದ ಮೊಹಮ್ಮದ್ ಸಿದ್ದಿಕ್.ಎಂ , ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಸಫಾ ಫಾರುಕ್, ಶ್ಯಾಮ ಭಟ್,ಪೂರ್ವವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ರಹೆಮಾನ್ ಉದ್ಯಾವರ ,ನಿವೃತ್ತ ಶಿಕ್ಷಕ ಈಶ್ವರ ಸರ್,ಹಿರಿಯ ಶಿಕ್ಷಕಿ ಶ್ರೀಮತಿ ಅಮಿತಾ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಂಘಟನಾ ಸಮಿತಿಯ ಸಂಚಾಲಕರೂ ಶಾಲಾ ಮುಖ್ಯೋ ಪಾಧ್ಯಾಯರಾದ ಬಾಲಕೃಷ್ಣ. ಜಿ.ಸ್ವಾಗತಿಸಿ, ವಿ.ಎಚ್.ಎಸ್.ಸಿ. ಪ್ರಾಚಾರ್ಯರಾದ ಶಿಶುಪಾಲನ್ ವಂದಿಸಿದರು. ಶಿಕ್ಷಕರÁದ ಅಶ್ರಫ್, ದಿವಾಕರ ಬಲ್ಲಾಳ್, ಕವಿತಾ ನಿರೂಪಿ ಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು.