ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳದ ಶಾಲೆಯಲ್ಲಿ ವಿದಾಯಕೂಟ ಸಮಾರಂಭ
ಮಂಜೇಶ್ವರ: ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳದ ಶಾಲೆಯಲ್ಲಿ ಕಳೆದ 23 ವರ್ಷಗಳ ಕಾಲ ಕಚೇರಿ ಸಹಾಯಕರಾಗಿ ಸೇವೆಯನ್ನು ಸಲ್ಲಿಸಿ ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ದತ್ತಾತ್ರೇಯ ಕಿಣಿ ಬಿ ಇವರಿಗೆ ವಿದಾಯ ಕೂಟ ಸಮಾರಂಭವು ನಿನ್ನೆ ಜರಗಿತು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸುರೇಖ ಮಲ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹೈಯರ್ ಸೆಕೆಂಡರಿ ಶಾಲೆಯ ಉಪ ಪ್ರಾಂಶುಪಾಲೆ ಆರತಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ತೇಜೇಶ್ ಕಿರಣ್ ಉಪಸ್ಥಿತರಿದ್ದರು. ದತ್ತಾತ್ರೇಯ ಕಿಣಿ ಬಿ ಮತ್ತು ಸುಧಾ ಶೆಣೈ ದಂಪತಿಗಳನ್ನು ಗೌರವಿಸಲಾಯಿತು. ಇವರ ಬಗ್ಗೆ ಅಭಿನಂದನಾ ಪತ್ರವನ್ನು ಪೂರ್ಣಯ್ಯ ಪುರಾಣಿಕ್ ವಾಚಿಸಿದರು. ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಕಿರಣ್ ಕುಮಾರ್, ನಿವೃತ್ತ ಮುಖ್ಯಶಿಕ್ಷಕ ಉದಯಶಂಕರ್ ಭಟ್, ನಿವೃತ್ತ ಶಿಕ್ಷಕ ಪುಂಡಲೀಕ ನಾಯಕ ಮಾತ ನಾಡಿದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸುರೇಖಮಲ್ಯ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಾಲೆಯ ನಿವೃತ್ತ ಶಿಕ್ಷಕರು, ನಿವೃತ್ತ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.ಸಂಸ್ಕೃತ ಅಧ್ಯಾಪಕ ನಾರಾಯಣ ಹೆಗ್ಡೆ ನಿರೂಪಿಸಿದರು. ವಸುಧಾಲಕ್ಷ್ಮಿ ವಂದಿಸಿದರು.