ಮಕ್ಕಳಿಬ್ಬರಿಗೆ ಇರಿದ ತಂದೆಗೆ ನ್ಯಾಯಾಂಗ ಬಂಧನ
ಉಪ್ಪಳ: ಮಕ್ಕಳಿಬ್ಬರಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂ ಬಂಧಿಸಿ ತಂದೆಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಉಪ್ಪಳ ಬಳಿಯ ಪಚ್ಲಂಪಾರೆ ನಿವಾಸಿಗಳಾದ ಸುಹೈಲ್ (32), ಸಹೋದರ ಮಶೂ ಕ್ (28) ನೀಡಿದ ದೂರಿನಂತೆ ತಂದೆ ಮೊಹಮ್ಮದ್ ಹನೀಫ್ (55) ವಿರುದ್ಧ ಮಂಜೇಶ್ವರ ಪೊಲೀ ಸರು ಕೊಲೆಯತ್ನ ಕೇಸು ದಾಖಲಿಸಿ ದ್ದರ. ಶನಿವಾರ ರಾತ್ರಿ 10.15ರ ವೇಳೆ ಇರಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ.