ಮಕ್ಕಳು ಸಿಡಿಸಿದ ಪಟಾಕಿಯಿಂದ ಬೆಂಕಿ: ಹತ್ತು ಎಕರೆ ಸ್ಥಳದಲ್ಲಿದ್ದ ಹುಲ್ಲು ನಾಶ
ಕಾಸರಗೋಡು: ಮಕ್ಕಳು ಸಿಡಿಸಿದ ಪಟಾಕಿಯಿಂದ ಬೆಂಕಿ ತಗಲಿ ಹತ್ತು ಎಕರೆ ಸ್ಥಳದಲ್ಲಿದ್ದ ಒಣಹುಲ್ಲು ಉರಿದು ನಾಶಗೊಂ ಡಿತು. ಪೆರಿಯ ಬಳಿಯ ಪಾಕಂ ಕುಟ್ಟಕ್ಕನಿ ಎಂಬಲ್ಲಿ ನಿನ್ನೆ ಮಧ್ಯಾಹ್ನ ವೇಳೆ ಘಟನೆ ನಡೆದಿದೆ. ವಿಷಯ ತಿಳಿದು ಕಾಞಂ ಗಾಡ್ನಿಂದ ಆಗಮಿಸಿದ ಅಗ್ನಿ ಶಾಮಕದಳ ಹಾಗೂ ನಾಗರಿಕರು ಸೇರಿ ಬೆಂಕಿ ನಂದಿಸಿದರು. ಖಾಸಗಿ ವ್ಯಕ್ತಿಯ ಹಿತ್ತಿಲಿನಲ್ಲಿ ಯಂತ್ರ ಮೂಲಕ ಕತ್ತರಿಸಿ ರಾಶಿ ಹಾಕಿದ್ದ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಅದು ಬಳಿಕ ಪರಿಸರದಲ್ಲಿ ಹರಡಿತ್ತು.