ಮಗಳ ಮನೆಗೆ ಬಂದ ವ್ಯಕ್ತಿ ಆನೆ ದಾಳಿಯಿಂದ ಸಾವು
ಪಾಲಕ್ಕಾಡ್: ಮಗಳ ಮನೆಗೆ ಬಂದ ತಮಿಳುನಾಡು ನಿವಾಸಿಯನ್ನು ಆನೆ ಮೆಟ್ಟಿ ಕೊಲೆಗೈದ ದಾರುಣ ಘಟನೆ ನಡೆದಿದೆ. ತಮಿಳುನಾಡಿನ ಚಿನ್ನತ್ತಡಾಗಂ ನಿವಾಸಿ ರಾಜಪ್ಪನ್ ಎಂಬವರು ಮೃತಪಟ್ಟ ವ್ಯಕ್ತಿ. ಇವರು ಅಟ್ಟಪ್ಪಾಡಿಯಲ್ಲಿರುವ ಮಗಳ ಮನೆಗೆ ಬಂದಿದ್ದರು. ಮನೆಗೆ ಹೊಂದಿಕೊಂಡಿರುವ ಶೆಡ್ನಲ್ಲಿ ಇವರು ನಿದ್ರಿಸಿದ್ದರು. ನಿನ್ನೆ ರಾತ್ರಿ ವೇಳೆ ಕಾಡಾನೆ ಸಮೀಪದ ಕೃಷಿ ಸ್ಥಳಕ್ಕೆ ದಾಳಿ ನಡೆಸಿದೆ. ಶಬ್ದ ಕೇಳಿ ರಾಜಪ್ಪನ್ ಹೊರಗಿಳಿದಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಕಾಡಾನೆ ಅವರ ಮೇಲೆ ದಾಳಿ ನಡೆಸಿದೆ. ರಾಜಪ್ಪನ್ ತಕ್ಷಣ ಮೃತಪಟ್ಟಿದ್ದಾರೆ.