ಮಜೀರ್ಪಳ್ಳದಲ್ಲಿ ಅಂಗಡಿ ಬೆಂಕಿಗಾಹುತಿ ಅಪಾರ ನಾಶನಷ್ಟ
ವರ್ಕಾಡಿ: ಮಜೀರ್ಪಳ್ಳ ಜಂಕ್ಷನ್ನಲ್ಲಿ ನಿನ್ನೆ ರಾತ್ರಿ ಅಂಗಡಿ ಯೊಂದು ಬೆಂಕಿಗಾಹುತಿಯಾಗಿ ಅಪಾರ ನಾಶನಷ್ಟ ಸಂಭವಿಸಿದೆ. ಪೊಯ್ಯತ್ತಬೈಲು ನಿವಾಸಿ ಪ್ರಕಾಶ ಎಂಬವರ ಕಾರ್ತಿಕ್ ಎಂಟರ್ಪ್ರೈಸ ಸ್ನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ನಿನ್ನೆ ರಾತ್ರಿ ೭.೩೦ರ ವೇಳೆ ಅಂಗಡಿ ಮುಚ್ಚಿ ಪ್ರಕಾಶ್ ಮನೆಗೆ ತೆರಳಿದ್ದರು. ೮ ಗಂಟೆ ವೇಳೆ ಅಂಗಡಿಯಲ್ಲಿ ಬೆಂಕಿ ಹತ್ತಿಕೊಂಡಿರುವುದು ಸ್ಥಳೀಯರಿಗೆ ಕಂಡುಬಂದಿದೆ. ಅವರು ನೀಡಿದ ಮಾಹಿತಿಯಂತೆ ಪ್ರಕಾಶ್ ಮರಳಿ ಬಂದಿದ್ದಾರೆ.
ಇದೇ ವೇಳೆ ಸ್ಥಳೀಯ ವ್ಯಾಪಾರಿಗಳು, ನಾಗರಿಕರು ಹಾಗೂ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಸೇರಿ ಬೆಂಕಿ ನಡಿಸುವ ಕಾರ್ಯ ನಡೆಸಿದ್ದು, ಆದರೆ ಬಹುತೇಕ ಸಾಮಗ್ರಿಗಳು ಉರಿದು ನಾಶಗೊಂಡಿದೆ. ಅಂಗಡಿಯೊಳಗಿದ್ದ ಕಂಪ್ಯೂಟರ್, ಸಿಸಿ ಕ್ಯಾಮರಾ ಸಹಿತ ವಿವಿಧ ಸಾಮಗ್ರಿಗಳು ನಾಶಗೊಂ ಡಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆಯೆಂದು ತಿಳಿಸಲಾಗಿದೆ.